
ಬೆಂಗಳೂರು: ಬಕ್ರಿದ್ ಆಚರಣೆಯ ಹಿನ್ನಲೆ ಬನ್ನೆರುಘಟ್ಟ ಮುಖ್ಯ ರಸ್ತೆ ಮತ್ತು ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ರಾಜ್ಯಾದ್ಯಂತ ಸೋಮವಾರ ಬಕ್ರೀದ್ ಪ್ರಯುಕ್ತ ಬೆಂಗಳೂರಿನಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಮುಸ್ಲಿಂಮರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುವ ಹಿನ್ನಲೆ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಕ್ರಮ ವಹಿಸಲು ಮುಂದಾಗಿದ್ದಾರೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಳಿಗ್ಗೆ 8 ರಿಂದ 11:30 ರ ವರೆಗೆ
ಎಲ್ಲೆಲ್ಲಿ ರಸ್ತೆಗಳ ಸಂಚಾರ ನಿಷೇಧ
ನಗರದ ಬಸವೇಶ್ವರ ಸರ್ಕಲ್ - ಸಿಐಡಿ ಜಂಕ್ಷನ್
ಲಾಲ್ ಬಾಗ್ ಮೇನ್ ಗೇಟ್ - ಕಣ್ಣಪ್ಪ ಪೆಟ್ರೋಲ್ ಬಂಕ್
ಮೈಸೂರು ರಸ್ತೆಯ ಟೋಲ್ ಗೇಟ್ ಜಂಕ್ಷನ್ - ಸಿರ್ಸಿ ಸರ್ಕಲ್ ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Poll (Public Option)

Post a comment
Log in to write reviews