
ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಬೆಂಗಳೂರಿನ ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬಿಗ್‌ಬಾಸ್‌ನಲ್ಲಿ ಜೊತೆಯಾಗಿದ್ದ ಈ ಜೋಡಿ ಫೆಬ್ರವರಿ 26, 2020ರಲ್ಲಿ ವಿವಾಹವಾಗಿದ್ದರು.. ಈ ಮೂಲಕ 4 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಲಿದೆ. ಸ್ವ ಇಚ್ಛೆಯಿಂದ ತಾವು ದೂರುವಾಗೋದಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಚಂದನ್ ಶೆಟ್ಟಿ ಮೈಸೂರು ದಸರಾದ ವೇದಿಕೆಯಲ್ಲೇ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿ ವಿವಾದ ಸೃಷ್ಟಿ ಮಾಡಿಕೊಂಡಿದ್ದರು. ಬಳಿಕ ಜೊತೆಯಾಗಿದ್ದ ಈ ಕಿರುತೆರೆ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗುತ್ತಿದ್ದಾರೆ.. ಕೆರಿಯರ್ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=3JTLXUdMkcM
Poll (Public Option)

Post a comment
Log in to write reviews