2024-09-19 04:39:50

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜೀನಾಮೆ ನೀಡಿದ ಕೊಲಂಬಿಯಾ ಯುನಿರ್ಸಿಟಿ ಅಧ್ಯಕ್ಷೆ - ಮಿನೌಚೆ ಶಫೀಕ್

ನ್ಯೂಯಾರ್ಕ್: ಹಮಾಸ್-ಇಸ್ರೇಲ್ ಯುದ್ಧದ ಸಂಬಂಧ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಉಂಟಾದ ಪ್ರತಿಭಟನೆಗಳ ಪ್ರಕ್ಷುಬ್ಧತೆಯನ್ನು ಅವರು ಎದುರಿಸಿದ್ದರು. ಹೀಗಾಗಿ ಕೊಲಂಬಿಯಾ ಯುನಿವರ್ಸಿಟಿಯ ಅಧ್ಯಕ್ಷರಾದ ಮಿನೌಚೆ ಶಫೀಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮ್ಯಾನ್‌ಹ್ಯಾಟನ್‌ನಲ್ಲಿರುವ ಐವಿ ಲೀಗ್ ಶಾಲೆಯಲ್ಲಿ ಈ ಯುದ್ಧ ಸಂಬಂಧ ಭಾರೀ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೇ ಪ್ಯಾಲೆಸ್ತೇನಿ ಪರ ಹೋರಾಟದಲ್ಲಿ ನಡೆದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ಕಾರಣವಾಗಿತ್ತು. ಅಲ್ಲದೇ, ಈ ಪ್ರತಿಭಟನೆಗಳು ದೇಶದೆಲ್ಲೆಡೆಯ ಕಾಲೇಜುಗಳಿಗೂ ವ್ಯಾಪಿಸಿತ್ತು. ಘಟನೆಯಲ್ಲಿ ಅನೇಕರ ಬಂಧನ ಕೂಡ ಆಗಿತ್ತು.

ಮೂವರು ಡೀನ್‌ಗಳ ರಾಜೀನಾಮೆ ಬಳಿಕ ಇದೀಗ ಶಫೀಕ್ ರಾಜೀನಾಮೆ ಸಲ್ಲಿಕೆ ಆಗಿದೆ ಎಂದು ದೃಢಪಟ್ಟಿದೆ. ಅವರು ಕ್ಯಾಂಪಸ್ ಚರ್ಚೆಯಲ್ಲಿ ಯಹೂದಿ ಜೀವನ ಪರ ಮತ್ತು ವಿರೋಧಿಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಫೀಕ್ ಕೂಡ ಯುನಿವರ್ಸಿಟಿ ನಾಯಕಿಯಾಗಿದ್ದು, ಈ ವರ್ಷದ ಆರಂಭದಲ್ಲಿ ಅವರನ್ನು ಪ್ರಶ್ನಿಸಲು ಕಾಂಗ್ರೆಸ್ ಕರೆ ನೀಡಿತ್ತು. ಕೊಲಂಬಿಯಾದ ಕ್ಯಾಂಪಸ್‌ನಲ್ಲಿ ಯೆಹೂದಿ ವಿರೋಧಿಗಳ ಬಗ್ಗೆ ಅವರು ಕ್ರಮ ಕೈಗೊಂಡಿಲ್ಲ ಎಂದು ಕೂಡ ರಿಪಬ್ಲಿಕನ್ ಟೀಕೆ ಮಾಡಿತ್ತು.

ಕಳೆದ ವರ್ಷ ಜನವರಿಯಲ್ಲಿ ಶಫೀಕ್ ನೇಮಕವಾಗಿದ್ದು, ಸೆ.3ರಂದು ತರಗತಿ ಆರಂಭವಾಗುವ ಮುನ್ನವೇ ಅವರು ಯುನಿವರ್ಸಿಟಿ ಸಮುದಾಯಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೊಲಂಬಿಯನ್ ಐಡಿ ಮತ್ತು ನೊಂದಣಿ ಅತಿಥಿಗಳಿಗೆ ಕ್ಯಾಂಪಸ್ ಸೇವೆಯನ್ನು ನಿಯಂತ್ರಿಸಲು ಯುನಿವರ್ಸಿಟಿ ಮುಂದಾಗಿದೆ. ಹೊಸ ಸೆಮಿಸ್ಟರ್‌ಲ್ಲಿ ಅಡಚಣೆಯನ್ನು ಹತ್ತಿಕ್ಕುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ರಾಜೀನಾಮೆ ಪ್ರಮುಖ ಕ್ಷೇತ್ರದಲ್ಲಿ ಪ್ರಗತಿಯ ನಡುವೆ ನಮ್ಮ ಸಮುದಾಯದಲ್ಲಿನ ವಿಭಿನ್ನ ದೃಷ್ಟಿಕೋನವನ್ನು ಎದುರಿಸುವಲ್ಲಿ ಕಷ್ಟವಾಗಿದೆ. ಈ ಅವಧಿಯಲ್ಲಿ ನಮ್ಮ ಕುಟುಂಬ ಗಣನೀಯ ಪರಿಣಾಮ ಎದುರಿಸಿದೆ. ಈ ಬೇಸಿಗೆಯಲ್ಲಿ ನನ್ನ ಸವಾಲನ್ನು ಎದುರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಶಫೀಕ್ ರಾಜೀನಾಮೆ ಹಿನ್ನೆಲೆ ಮಧ್ಯಂತರ ಅಧ್ಯಕ್ಷರಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಇರ್ವಿಂಗ್ ವೈದ್ಯಕೀಯ ಕೇಂದ್ರದ ಸಿಇಒ ಕತ್ರಿನಾ ಆರ್ಮ್‌ಸ್ಟ್ರಾಂಗ್ ಹುದ್ದೆ ನಿರ್ವಹಣೆ ಮಾಡಲಿದ್ದಾರೆ ಎಂದು ಕೊಲಂಬಿಯಾ ಮಂಡಳಿಯ ಟ್ರಸ್ಟಿಗಳು ತಿಳಿಸಿದ್ದಾರೆ.

ಹೊಸ ಜವಾಬ್ಧಾರಿ ಕುರಿತು ಮಾತನಾಡಿರುವ ಕತ್ರಿನಾ ಆರ್ಮ್ಸ್ಟ್ರಾಂಗ್, ಸವಾಲಿನ ಸಮಯಗಳು ಸಮುದಾಯದಲ್ಲಿ ಪ್ರತಿಯೊಂದು ಗುಂಪು ಮತ್ತು ವ್ಯಕ್ತಿಯಿಂದ ಗಂಭೀರ ನಾಯಕತ್ವದ ಅವಕಾಶ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿರುತ್ತದೆ. ಈ ಹುದ್ದೆಗೆ ನಾನು ಕಾಲಿಡುತ್ತಿದ್ದು, ಕಳೆದೊಂದು ವರ್ಷದಿಂದ ಯುನಿವರ್ಸಿಟಿಯಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಅರಿವಿದೆ ಎಂದಿದ್ದಾರೆ.

Post a comment

No Reviews