
ಮೈಸೂರು: ಮುಡಾ ಪ್ರಕರಣದ ಬಗ್ಗೆ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ. ಈ ಬೆನ್ನಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರು ಪ್ರತಿಭಟನೆ ಕರೆ ನೀಡಿದ್ದಾರೆ. ಇನ್ನೂ ಬಗ್ಗೆ ಮೈಸೂರಿನಲಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಮಾನ್ಯ ಸಿದ್ದರಾಮಯ್ಯ ಸಾಹೇಬರೇ, ಜಾರ್ಖಂಡ್ ನ ಹೇಮಂತ್ ಸೊರೇನ್ ಅಥವಾ ದೆಹಲಿಯ ಅರವಿಂದ್ ಕೇಜ್ರಿವಾಲ್ ರೀತಿ ಕುರ್ಚಿಗೆ ಅಂಟಿಕೊಂಡು ಕಳಪೆ ರಾಜಕಾರಣ ಮಾಡಬೇಡಿ, ಬದಲಾಗಿ ನಿಮ್ಮ 40 ವರ್ಷಗಳ ಮೌಲ್ಯಯುತ ರಾಜಕಾರಣದ ಆಶಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೂಡಲೇ ರಾಜೀನಾಮೆ ನೀಡಿ, ರಾಜಕಾರಣದ ಮೇಲ್ಪಂಕ್ತಿಯನ್ನು ಕಲ್ಪಿಸಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
Poll (Public Option)

Post a comment
Log in to write reviews