ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ: ರೈಲುಗಳ ಪುನರ್ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ
ಹಾಸನ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದ ಕಾರಣಕ್ಕೆ ಆ.4ರವರೆಗೆ 14 ರೈಲುಗಳ ಓಡಾಟ (trains are Cancelled) ರದ್ದುಪಡಿಸಲಾಗಿತ್ತು. ಇದೀಗ ಅಸ್ತವ್ಯಸ್ತಗೊಂಡಿದ್ದ ರೈಲ್ವೆ ಹಳಿ ಸರಿಪಡಿಸಿ ರಿಸ್ಟೋರೇಷನ್ ಕಾರ್ಯ (Train services) ಪೂರ್ಣಗೊಂಡಿದೆ. ನಿನ್ನೆ (ಆ. 08) ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ.
ಕಳೆದ ಜು.27ರಂದು ಹಾಸನ ಜಿಲ್ಲೆಯ (Hassan news) ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟಕ್ಕೆ (Karnataka Rain News) ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು (landslide) ಕುಸಿದಿತ್ತು. ಸಕಲೇಶಪುರ (Sakaleshpur) ತಾಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದ ಪರಿಣಾಮ ರೈಲುಗಳ ಓಡಾಟ ಬಂದ್ (Train services) ಆಗಿತ್ತು.
ಕಳೆದ 20 ದಿನಗಳಿಂದ ಬಂದ್ ಆಗಿದ್ದ ಪ್ಯಾಸೆಂಜರ್ ರೈಲು ಸಂಚಾರ ಶುರುವಾಗಿದೆ. ಮೊದಲು ಯಶವಂತಪುರ- ಮಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸಂಚಾರಿಸಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಎರಡು ದಿನಗಳ ಹಿಂದೆ ಗೂಡ್ಸ್ ರೈಲು ಓಡಿಸಿ ಟ್ರ್ಯಾಕ್ ಚೆಕ್ ಮಾಡಿದ್ದರು. ಎಡೆಕುಮರಿ ಬಳಿ 420 ಸಿಬ್ಬಂದಿ ಒಟ್ಟುಗೂಡಿ ರೈಲ್ವೆ ಹಳಿ , ಭೂಕುಸಿತದ ಸ್ಥಳ ಸರಿಪಡಿಸಿದ್ದರು.
ನಿರಂತರ ಮತ್ತು ಭಾರೀ ಮಳೆಯ ಹೊರತಾಗಿಯೂ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದ ಕಡಗರವಳ್ಳಿ ಮತ್ತು ಯಡಕುಮರಿ ನಿಲ್ದಾಣಗಳ ನಡುವಿನ ಹಳಿಯ ಪುನಃಸ್ಥಾಪನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಾರ್ಯಾಚರಣೆಗೆ ಮಳೆ ಆಗಾಗ್ಗೆ ಅಡ್ಡಿಪಡಿಸಿತ್ತು. ಆ.4 ರಂದು ಬೆಳಗ್ಗೆ 08:58 ಗಂಟೆಗೆ ಸರಕು ರೈಲಿಗೆ ಮಾತ್ರ ‘ಸೂಕ್ತ’ ಎಂದು ಪ್ರಮಾಣೀಕರಿಸಲಾಯಿತು. ಇದರೊಟ್ಟಿಗೆ ಟ್ರ್ಯಾಕ್‌ನ ಸುರಕ್ಷತೆಯನ್ನು ನಿರ್ಣಯಿಸಲು ಮತ್ತು ದೃಢೀಕರಿಸಲು ಎಂಜಿನ್ ರೋಲಿಂಗ್ ಪರೀಕ್ಷೆಯನ್ನು ನಡೆಸಲಾಯಿತು.
ಆನಂತರ ಆ.6ರಂದು, ಸಂಪೂರ್ಣವಾಗಿ ಲೋಡ್ ಮಾಡಿದ ಸರಕು ರೇಕ್ ಪುನಃಸ್ಥಾಪಿಸಲಾದ ಟ್ರ್ಯಾಕ್ ಅನ್ನು ಯಶಸ್ವಿಯಾಗಿ ದಾಟಿತ್ತು. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 15 ಕಿ.ಮೀ ವೇಗದ ನಿರ್ಬಂಧವನ್ನು ವಿಧಿಸಲಾಗಿದೆ. ನಿನ್ನೆ ಗುರುವಾರ ಮೊದಲ ಪ್ಯಾಸೆಂಜರ್ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ 12:37 ಗಂಟೆಗೆ ಯಶಸ್ವಿಯಾಗಿ ಹಾದುಹೋಗಿದೆ. ಆ ಮಾರ್ಗದಲ್ಲಿನ ಎಲ್ಲಾ ರೈಲುಗಳು ಅವುಗಳ ನಿಗದಿತ ದಿನಾಂಕ ಮತ್ತು ಸಮಯದ ಪ್ರಕಾರ ಚಲಿಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Post a comment
Log in to write reviews