2024-12-24 06:17:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರೇಣುಕಾಸ್ವಾಮಿ ಕೊಲೆ ಪ್ರಕರಣ – ತುಮಕೂರು ಜೈಲಿನಿಂದ ಬಿಡುಗಡೆಯಾದ ಮೂವರು ಆರೋಪಿಗಳು

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ  ಹಿನ್ನೆಲೆ ಮೂವರು ಆರೋಪಿಗಳು ಇಂದು (ಅ.2) ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸೆ.23 ರಂದು ಮೂವರು ಆರೋಪಿಗಳಾದ ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರ ಬಳಿ ಕೋರ್ಟ್ 2 ಲಕ್ಷ ರೂ. ಹಣ ಕೇಳಿದ್ದರು. ಆದರೆ ಜಾಮೀನು ಶ್ಯೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದರು.
ಶ್ಯೂರಿಟಿದಾರರು ಸಿಗದೇ ಸತತ 9 ದಿನಗಳಿಂದ ಪರದಾಟ ನಡೆಸುತ್ತಿದ್ದ ಕುಟುಂಬಸ್ಥರಿಗೆ ಮಂಗಳವಾರ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ತುಮಕೂರು ಜೈಲಾಧಿಕಾರಿಗಳಿಗೆ ಜಮೀನು ಆದೇಶದ ಪ್ರತಿ ಮೇಲ್ ಮೂಲಕ ಮಂಗಳವಾರ ರಾತ್ರಿ ತಲುಪಿದ್ದು, ಆರೋಪಿಗಳಿಗೆ ಷರತ್ತುಬದ್ಧ ಜಾಮೀನಿನ ಮೇಲೆ ಬುಧವಾರ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. 
 

Post a comment

No Reviews