ರೇಣುಕಾಸ್ವಾಮಿ ಕೊಲೆ ಕೇಸ್ – ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣಗೂ ವಿಚಾರಣೆ ಶಾಕ್

ಬೆಂಗಳೂರು : ನಟ ದರ್ಶನ್ ಗ್ಯಾಂಗ್ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಕೇಸ್ ಕುರಿತಾಗಿ ಇದೀಗ ಪಟ್ಟಣಗೆರೆ ಶೆಡ್ ಮಾಲೀಕ ಜಯಣ್ಣ ಅವರಿಗೂ ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ.
ಹತ್ಯೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪಟ್ಟಣಗೆರೆ ಶೆಡ್ ಮಾಲೀಕ ಜಯಣ್ಣ ಅವರು ರೇಣುಕಾಸ್ವಾಮಿ ಕೊಲೆಗೂ ತಮಗೂ ಯಾವುದೇ ಸಂಬಂಧವಿಲ್ಲ. ವಿಚಾರಣೆ ಎದುರಿಸಲು ಸಿದ್ಧ ಎಂದೂ ಪ್ರತಿಕ್ರಿಯೆ ನೀಡಿದ್ದರು. ಇದೀಗ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ಜಯಣ್ಣ ಅವರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೆಡ್‌ನಲ್ಲಿ ನಡೆಯುತ್ತಿದ್ದ ಚಟುವಟಿಕೆ ಬಗ್ಗೆ ನಿಮಗೆ ಮಾಹಿತಿ ಇತ್ತಾ? ದರ್ಶನ್ ಪದೇ-ಪದೇ ಶೆಡ್‌ಗೆ ಬಂದು ಹೋಗ್ತಾ ಇದ್ರಾ? ಎಂಬೆಲ್ಲ ಪ್ರಶ್ನೆಗಳನ್ನು ಪೊಲೀಸರು ಪಟ್ಟಣಗೆರೆ ಜಯಣ್ಣಗೆ ಕೇಳಿದ್ದಾರೆ. ಶೆಡ್‌ಗೆ ದರ್ಶನ್ ಎರಡನೇ ಸಲ ಬಂದಿರೋದು ಎಂದು ಜಯಣ್ಣ ಮಾಹಿತಿ ನೀಡಿದ್ದಾರೆ. ಶೆಡ್ ದಾಖಲೆ ಪತ್ರಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಶೆಡ್‌ನ ಸೀಜ್ ಮಾಡಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ದರ್ಶನ್ ಸೇರಿ ಆರೋಪಿಗಳನ್ನು ಕೂಡ ಶೆಡ್‌ಗೆ ಕರೆತಂದು ಮಹಜರ್ ನಡೆಸಲಾಗಿದೆ.
Poll (Public Option)

Post a comment
Log in to write reviews