
ಬೆಂಗಳೂರು: ಕನ್ನಡದ ನಟ ದರ್ಶನ್ ಮತ್ತು ಆತನ ಸಹಚರರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಆರೋಪವಿರುವ ಪ್ರಕರಣದಲ್ಲಿ ಕೊಲೆಯಾಗಿರುವ ಚಿತ್ರದುರ್ಗ ಮೂಲಕ ರೇಣುಕಾ ಸ್ವಾಮಿಯವರ ಮರಣೋತ್ತರ ವರದಿ ಬಹಿರಂಗವಾಗಿದ್ದು, ಅದರಲ್ಲಿ ಬೆಚ್ಚಿ ಬೀಳಿಸುವ ಅನೇಕ ಸಂಗತಿಗಳು ಹೊರಬಿದ್ದಿವೆ. ರೇಣುಕಾ ಸ್ವಾಮಿಯವರ ಮರಣೋತ್ತರ ವರದಿಯಲ್ಲಿ ಬಹಿರಂಗವಾಗಿರುವ ಪ್ರಮುಖ ವಿವರಗಳ ಮಾಹಿತಿ ಇಲ್ಲಿದೆ.
• ರೇಣುಕಾ ಸ್ವಾಮಿಯವರ ಮರಣೋತ್ತರ ವರದಿಯ ಪ್ರಕಾರ, ಆತನ ಮರ್ಮಾಂಗಕ್ಕೆ ತೀವ್ರವಾಗಿ ಹೊಡೆತ ಬಿದ್ದಿರುವ ಪರಿಣಾಮ ರಕ್ತಸ್ರಾವ ಉಂಟಾಗಿ ಆತ ಸಾವಿಗೀಡಾಗಿದ್ಧಾನೆ.
• ರೇಣುಕಾ ಸ್ವಾಮಿಯವರ ದೇಹದ 18 ಭಾಗಗಳ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ.
• ಹೊಟ್ಟೆಯ ಭಾಗಕ್ಕೆ ಕಟ್ಟಿಗೆಯಿಂದ ಹೊಡೆದಿರುವ ಮತ್ತು ಕಾಲಿನಿಂದ ತುಳಿದಿರುವ ಕಾರಣದಿಂದ ಹೊಟ್ಟೆಯಲ್ಲಿಯೂ ರಕ್ತಸ್ರಾವ ಉಂಟಾಗಿದೆ.
• ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿರುವ ಪರಿಣಾಮ ಬಾಯಿಯ ದವಡೆ ಮುರಿದಿದೆ.
• ಬೆನ್ನಿನ ಮೇಲೆ ರಬ್ಬರ್ನಿಂದ ತಳಿಸಿರುವ ಪರಿಣಾಮ ಹಿಂಭಾಗದ ಚರ್ಮ ಕಿತ್ತು ಬಂದಿದೆ.
• ತಲೆಯ ಭಾಗಕ್ಕೂ ತೀವ್ರವಾಗಿ ಹೊಡೆಯಲಾಗಿದ್ದು, ಅಲ್ಲಿಯೂ ರಕ್ತಸ್ರಾವ ಉಂಟಾಗಿದ್ದು, ಅದರಿಂದಲೇ ಆತ ಪ್ರಜ್ಞೆ ತಪ್ಪಿದ್ದಾನೆ.
• ಕಾಲಿನಿಂದ ಒದ್ದಿರುವ ಪರಿಣಾಮ ಹೊಟ್ಟೆಯ ಭಾಗದ ಪಕ್ಕೆಲುಬುಗಳು ಮುರಿದಿವೆ.
• ರೇಣುಕಾ ಸ್ವಾಮಿಯವರನ್ನು ಅತ್ಯಂತ ಭೀಕರವಾಗಿ ತಳಿಸಿ, ಹಿಂಸೆ ನೀಡಿ ಕೊಂದು ಹಾಕಲಾಗಿದೆ.
Poll (Public Option)

Post a comment
Log in to write reviews