
ಹೈದರಾಬಾದ್: ಅಗ್ನಿ ಕ್ಷಿಪಣಿಗಳ ಪಿತಾಮಹ,DRDO ಖ್ಯಾತ ವಿಜ್ಞಾನಿ ರಾಮ್ ನರೈನ್ ಅಗರ್ವಾಲ್ ನಿಧನರಾಗಿದ್ದಾರೆ.
ಭಾರತದ ರಕ್ಷಣಾ ಸಂಶೋಧನೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ರಾಮ್ ನಾರಾಯಣ್ (84)ಅಗರ್ವಾಲ್ ಅವರು ಗುರುವಾರ ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ.
ಅಗ್ನಿ ಕ್ಷಿಪಣಿಗಳ ಪಿತಾಮಹ ಎಂದೇ ಕರೆಯಲ್ಪಡುವ ಅಗರ್ವಾಲ್ ಅವರು ಭಾರತದ ದೀರ್ಘಾವಧಿಯ ರಕ್ಷಣಾ ಸಂಶೋಧನೆ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಆಶ್ರಯದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಭಾರತದ ಕ್ಷಿಪಣಿ ತಂತ್ರಜ್ಞಾನಕ್ಕೆ ಅಗರ್ವಾಲ್ ಅವರ ಕೊಡುಗೆಗಳು ರಾಷ್ಟ್ರದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಅವರ ನಾಯಕತ್ವ ಮತ್ತು ಪರಿಣತಿಯು ಅಗ್ನಿ ಕ್ಷಿಪಣಿ ಸರಣಿಯ ಯಶಸ್ವಿ ಅಭಿವೃದ್ಧಿಗೆ ಕೇಂದ್ರವಾಗಿತ್ತು, ಇದು ಭಾರತದ ಕಾರ್ಯತಂತ್ರದ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿದೆ ಎಂದು ಹೇಳಲಾಗಿದೆ.
Poll (Public Option)

Post a comment
Log in to write reviews