
ದೆಹಲಿ : ಕೆಂಪುಕೋಟೆ ಮೇಲೆ ದಾಳಿ ನಡೆಸಿದ ಉಗ್ರ ಮೊಹಮ್ಮದ್‌ಗೆ ಮರಣದಂಡನೆ ಖಾಯಂ ಆಗಿದೆ.
ಉಗ್ರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ.
2000ನೇ ಇಸವಿಯ ಡಿಸೆಂಬರ್ 22ರ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ದಾಳಿ ನಡೆಸಿದ ಉಗ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನ ಮೂಲದ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಪಾಕ್‌ಗೆ ಮರಣ ದಂಡನೆ ಆಗಲಿದೆ.
2022 ರ ನವೆಂಬರ್ 3 ರಂದು ಆರಿಫ್ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಮತ್ತು ಪ್ರಕರಣದಲ್ಲಿ ಮರಣದಂಡನೆ ಎತ್ತಿ ಹಿಡಿದಿತ್ತು.
ಆ ಬಳಿಕ ಆತ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಆತನ ಅರ್ಜಿ ತಿರಸ್ಕರಿಸಿದ್ದಾರೆ.
Poll (Public Option)

Post a comment
Log in to write reviews