
ಬೆಂಗಳೂರಿನ ಚಿದಂಬರಂ ಸ್ಟೇಡಿಯಂ ನಲ್ಲಿ ಮೇ 13 ರಂದು ನಡೆದ ಐಪಿಲ್ ಪಂದ್ಯದಲ್ಲಿ ಆರ್ ಸಿ ಬಿ ಡೆಲ್ಲಿ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿತು.
ಮೊದಲು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬಾಯ್ಸ್ ಮೈದಾನದಲ್ಲಿ ರನ್ ಗಳ ಮಳೆಯನ್ನೇ ಸುರಿಸಿದರು. ಇದರ ಮೂಲಕ ಡೆಲ್ಲಿಗೆ 20 ಓವರ್ ಗೆ 187 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದರು. ಇದನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ 140 ರನ್ ಗಳನ್ನಷ್ಟೇ ಗಳಿಸಿ ಆಲೌಟ್ ಆಯಿತು. ಇದರ ಮೂಲಕ ಆರ್ ಸಿ ಬಿ 47 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಯಶ್ ದಯಾಳ್
ಇತ್ತ ಆರ್ ಸಿಬಿ ಯ ಬೌಲರ್ ಯಶ್ ದಯಾಳ್ ಬೌಲಿಂಗ್ ನಲ್ಲಿ ಭರ್ಜರಿ ಕಮಾಲ್ ಮಾಡಿದರು. ಈ ಪಂದ್ಯದಲ್ಲಿ 3 ಒವರ್ ಬೌಲಿಂಗ್ ಮಾಡಿದ ಅವರು ಕೇವಲ 20 ರನ್ ಗಳನ್ನಷ್ಟೆ ನೀಡಿ ಪ್ರಮುಖ 3 ವಿಕೆಟ್ ಅನ್ನು ತೆಗೆದರು. ದಯಾಳ್ ಮಾಡಿದ ಈ ಶಿಸ್ತಿನ ಬೌಲಿಂಗ್ ಆರ್ ಸಿ ಬಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿತು
Tags:
Poll (Public Option)

Post a comment
Log in to write reviews