
ಬೆಂಗಳೂರನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ ಸೇವನೆ ಪ್ರಕರಣದಲ್ಲಿ ತೆಲಗು ಪೋಷಕ ನಟಿ ಹೇಮಾಗೆ ಸಿಸಿಬಿಯಿಂದ ಮತ್ತೊಂದು ನೋಟಿಸ್ ಜಾರಿಯಾಗಿದೆ.ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ಹೇಮಾ ತನಿಖೆಗೆ ಹಾಜರಾಗಿರಲಿಲ್ಲಾ.ನೋಟಿಸ್ ಪ್ರಕಾರ ಇದೇ ಸೋಮವಾರ ಹೇಮಾ ವಿಚಾರಣೆಗೆ ಹಾಜರಾಗಬೇಕಿತ್ತು ಆದರೆ ಹೇಮಾ ವಿಚಾರಣೆಗೆ ಹಾಜರಾಗಲು ಒಂದು ವಾರ ಸಮಯ ಕೇಳಿದ್ರು.ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಬರ್ತಡೇ ಪಾರ್ಟಿಯೊಂದರಲ್ಲಿ ಆಂಧ್ರ ಪ್ರದೇಶದ ಹಲವು ಗಣ್ಯರು ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಮಾಧಕ ವಸ್ತುಗಳನ್ನ ಸೇವನೆ ಮಾಡಿದ್ದರು ಎಂಬ ಅನುಮಾನದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಯಲ್ಲಿ ಸಿಕ್ಕಿಬಿದ್ದ ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿರುವುದು ತಿಳಿದು ಬಂದಿತ್ತು. ಈ ನಡುವೆ ಹೇಮಾಳನ್ನು ಹೆಚ್ಚಿನ ವಿಚಾರಣೆಗೆ ಸಿಸಿಬಿ ನೋಟಿಸ್ ನೀಡಿತ್ತು,
ಅಲ್ಲದೆ ವಾಟ್ಸ್ಆ್ಯಪ್ ಮೂಲಕ ನೋಟಿಸ್ ನೀಡಿತ್ತು. ಆದರೆ ಹೇಮಾ ವಾರಗಳ ಕಾಲಾವಕಾಶ ಕೇಳಿ ಹಾಜರಾಗದೆ ಕಾಲಹರಣ ಮಾಡುತ್ತಿದ್ದಾರೆ. ಈ ನಡುವೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಹಲವು ಸಚಿವರು ಸಿಸಿಬಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಪಾರ್ಟಿಯಲ್ಲಿ ಭಾಗವಹಿಸಿದ ಗಣ್ಯರನ್ನು ವಿಚಾರಣೆಗೆ ಕರೆಯದಂತೆ ಪ್ರಭಾವಿಗಳಿಂದ ಒತ್ತಡದ ಕರೆಗಳು ಬರುತ್ತಿವೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
Poll (Public Option)

Post a comment
Log in to write reviews