
ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್ ಪಾರ್ಟಿಯ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ, ಪ್ರಕರಣದಲ್ಲಿ ನಟಿ ಹೇಮಾ ಪಾತ್ರದ ಬಗ್ಗೆಹೆಚ್ಚಿನ ಒತ್ತು ನೀಡಿದೆ ಎನ್ನಲಾಗಿದೆ.
ರೇವ್ ಪಾರ್ಟಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ ಈಗಾಗಲೇ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣ ಸಂಬಂಧ ಪಾರ್ಟಿ ಆಯೋಜಿಸಿದವರು ಹಾಗೂ ಡ್ರಗ್ಸ್ ಸಂಗ್ರಹಣೆ ಮಾಡಿ ಸೇವಿಸಿರುವ ಆರೋಪದ ಮೇಲೆ ಹಲವರ ಬಂಧನವಾಗಿದೆ.
ಪಾರ್ಟಿ ಆಯೋಜನೆಯಲ್ಲಿ ನಟಿಯ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು, ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಟಿಯ ಅಸಲಿ ಫೋನ್ ನಂಬರ್ ಪಡೆದು ಸಿಡಿಆರ್ ಅನ್ನು ಪರಿಶೀಲನೆ ನಡೆಸುತ್ತಿದೆ.
ಪಾರ್ಟಿಗೂ ಮುನ್ನ ಯಾರೆಲ್ಲ ನಟಿಗೆ ಕರೆ ಮಾಡಿದ್ದರು ಎಂಬುದನ್ನು ಪರಿಶೀಲಿಸಿರುವ ಅಧಿಕಾರಿಗಳು ಪಾರ್ಟಿ ಆಯೋಜನೆಗೂ ನಟಿ ಲಿಂಕ್ ಬಗ್ಗೆ ಮೊಬೈಲ್ ಡೇಟಾ ರಿಟ್ರಿವ್ ಮಾಡಲು ಎಫ್ ಎಸ್ಎಲ್ ಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಗಳ ಜೊತೆ ಈ ಪ್ರಕರಣ ಸಂಬಂಧ ಹೊಂದಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಸಲು ಸಿಸಿಬಿ ಮುಂದಾಗಿದೆ. ರೇವ್ ಪಾರ್ಟಿಗಳಿಗೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ಒದಗಿಸುವುದು ನಗರದಲ್ಲಿರುವ ಕೆಲ ನೈಜೀರಿಯ ಪ್ರಜೆಗಳು ಎಂಬುದನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು ಈ ನಿಟ್ಟಿನಲ್ಲೂ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
Poll (Public Option)

Post a comment
Log in to write reviews