
ಕೇರಳ: ನಟಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಸಿಪಿಐ ಶಾಸಕ ಮತ್ತು ನಟ ಎಂ.ಮುಖೇಶ್ ಅವರನ್ನು ವಿಶೇಷ ತನಿಖಾ ತಂಡ ಇಂದು ಬಂಧಿಸಿತು. ಆದರೆ ಈ ತಿಂಗಳ ಆರಂಭದಲ್ಲೇ ಮುಖೇಶ್ ಅವರು ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಅವರು ಜಾಮೀನಿನ ಮೂಲಕ ಬಿಡುಗಡೆಯಾದರು.
ಇನ್ನೂ ಈ ವೇಳೆ ಮುಖೇಶ್ ಅವರ ವಕೀಲರ ಜೊತೆಗಿದ್ದರು ಮತ್ತು ಎರ್ನಾಕುಲಂನಲ್ಲಿ ಎಸ್‌ಐಟಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಬಂಧನವನ್ನು ದಾಖಲಿಸಿದ ನಂತರ, ಅವರ ಸ್ವಂತ ವಾಹನದಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ಕಳೆದ ತಿಂಗಳು, ಮಹಿಳಾ ನಟಿಯೊಬ್ಬರು ಎಂ ಮುಖೇಶ್ ಸೇರಿದಂತೆ ನಾಲ್ವರು ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು.
Poll (Public Option)

Post a comment
Log in to write reviews