
'ಹ್ಯಾಪಿ ವೆಡ್ಡಿಂಗ್', 'ಚಂಕ್ಸ್', 'ಒರು ಅದಾರ್ ಲವ್', 'ಧಮಾಕಾ' ಖ್ಯಾತಿಯ ಮಲಯಾಳಂ ನಿರ್ದೇಶಕ ಓಮರ್ ಲುಲು ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಓಮರ್ ಲುಲು ನಿರ್ದೇಶಿಸಿದ್ದ ಚಿತ್ರವೊಂದರಲ್ಲಿ ಅಭಿನಯಿಸಿದ್ದ ನಟಿಯೊಬ್ಬರು ಕೊಚ್ಚಿ ಪೊಲೀಸ್ ಆಯುಕ್ತರ ಬಳಿ ದೂರ ನೀಡಿದ್ದು, ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನೆಡುಂಬಸ್ಸೆರಿ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಆರೋಪವನ್ನು ತಳ್ಳಿ ಹಾಕಿರುವ ನಿರ್ದೇಶಕ, ಯುವತಿಗೆ ನನಗೆ ತುಂಬ ದಿನಗಳಿಂದ ಪರಿಚಯ. ನನ್ನ ಜತೆ ಹಲವಾರು ಟ್ರಿಪ್‌ಗಳಿಗೂ ಬಂದಿದ್ದಾರೆ. ಆದರೆ, ಕಾರಣಾಂತರಗಳಿಂದ ನಮ್ಮಿಬ್ಬರ ನಡುವೆ ಬಿರುಕುಂಟಾಗಿತ್ತು. ಕಳೆದ ಆರು ತಿಂಗಳಿನಿಂದ ದೂರವಾಗಿದ್ದೇವೆ. ನನ್ನ ಹಿಂದಿನ ಚಿತ್ರದಲ್ಲೂ ಆಕೆ ನಟಿಸಿದ್ದರು. ಆಕೆಗೆ ಹೊಸ ಚಿತ್ರದಲ್ಲಿ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಅಥವಾ ನನ್ನಿಂದ ಹಣ ಕೀಳುವ ದುರುದ್ದೇಶದಿಂದಲೋ ದೂರು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Poll (Public Option)

Post a comment
Log in to write reviews