ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಹಾಡು ಅನಾವರಣ

ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದಲ್ಲಿ ಇದೀಗ ಚಿತ್ರದ 'ರಾಧೆ - ದಿ ವೆಡ್ಡಿಂಗ್ ಸಾಂಗ್' ಅನಾವರಣಗೊಂಡಿದೆ. ಚಂದ್ರಜಿತ್ ಬೆಳ್ಳಿಯಪ್ಪ ಸಾಹಿತ್ಯಕ್ಕೆ ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಲ್ಲಿ ಮಧುರ ಗೀತೆ ಮೂಡಿಬಂದಿದೆ.
ಆಕರ್ಷಕ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಮುಂದಿನ ತಿಂಗಳು ಚಿತ್ರಮಂದಿರ ಪ್ರವೇಶಿಸಲಿದೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿರೋ ಹಿನ್ನೆಲೆ ಸಿನಿಮಾ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ಪ್ರಚಾರ ಪ್ರಾರಂಭವಾಗಿದ್ದು, ಚಿತ್ರದ ಕೆಲ ಗೀತೆಗಳು ಅನಾವರಣಗೊಂಡಿವೆ. ಇಂದು ರಾಧೆ ಶೀರ್ಷಿಕೆಯ ಹೊಸ ಹಾಡು ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
'ರಾಧೆ - ದಿ ವೆಡ್ಡಿಂಗ್ ಸಾಂಗ್'ಗೆ ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯವಿದ್ದು, ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಜೊತೆಗೆ ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಲ್ಲಿ ಮಧುರ ಗೀತೆ ಮೂಡಿಬಂದಿದ್ದು, ಹಾಡಿಗೆ ದೀಕ್ಷಿತ್ ಕುಮಾರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ವಿಹಾನ್, ಅಂಕಿತ ಅಮರ್ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ಪರಂವಃ ಸ್ಟುಡಿಯೋಸ್ ಮೂಲಕ ಜಿ.ಎಸ್.ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
Poll (Public Option)

Post a comment
Log in to write reviews