2024-12-24 07:18:24

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಲಯಾಳಂ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ: ಟರ್ಬೊ ಪವರ್‌ ಫುಲ್‌ ಟ್ರೈಲರ್‌ ಬಿಡುಗಡೆ

ತಮ್ಮ ವಿಶಿಷ್ಟ ಅಭಿನಯ ಮತ್ತು ಅದ್ಭುತ ನಿರ್ದೇಶನದ ಮೂಲಕ ಸದ್ದು ಮಾಡಿರುವ ನಟ ರಾಜ್​ ಬಿ ಶೆಟ್ಟಿ.  ಮಲಯಾಳಂನಲ್ಲಿ ನಟಿಸುತ್ತಿರುವ ಸುದ್ದಿ ಈ ಹಿಂದೆ ಎಲ್ಲೆಡೆ ಸದ್ದು ಮಾಡಿತ್ತು. ಅಲ್ಲದೇ, ಮಲಯಾಳಂ ಚಿತ್ರತಂಡ ಕೂಡ ನಟನಿಗೆ ತಮ್ಮ ಚಿತ್ರತಂಡಕ್ಕೆ ಸ್ವಾಗತ ಕೋರಿತು. ಈ ಮೂಲಕ ರಾಜ್​ ಮಲಯಾಳಂನಲ್ಲಿ ಮಿಂಚಲು ಸಜ್ಜಾಗಿರುವ ಸುದ್ದಿ, ಅನೇಕ ಕನ್ನಡಿಗರಲ್ಲೂ ಸಂತೋಷ ತಂದಿತ್ತು. ಇದೀಗ ಈ ಚಿತ್ರತಂಡದ ಟ್ರೈಲರ್​ ಬಿಡುಗಡೆಯಾಗಿದೆ.

ಮಲಯಾಳಂನ ಖ್ಯಾತ ನಟ ಮುಮ್ಮುಟ್ಟಿ ಅವರೇ ಸ್ವತಃ ನಿರ್ಮಿಸಿ, ನಟಿಸುತ್ತಿರುವ 'ಟರ್ಬೋ' ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದನಲ್ಲಿ ನಟ ರಾಜ್​ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಯಾವ ಪಾತ್ರ, ಹೇಗಿರಲಿದೆ ಕಥೆ ಎಂಬ ಕುತೂಹಲ ಇದೀಗ ಎಲ್ಲ ಪ್ರೇಕ್ಷಕರಲ್ಲೂ ಮೂಡಿದೆ.

'ಟರ್ಬೋ' ಚಿತ್ರದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ಮೇ 14ರಂದು ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ರಾಜ್​ ಬಿ ಶೆಟ್ಟಿ ಕೂಡ ಭಾಗಿಯಾಗಿ, ಗಮನ ಸೆಳೆದರು. ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ, ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಕಂಡು ಬಂದಿರುವುದನ್ನು ನಾವು ಟ್ರೈಲರ್‌ ನಲ್ಲಿ ಗಮನಿಸಬಹುದು.

ಈ ಚಿತ್ರವನ್ನು ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರು ಕಥೆ ಬರೆದಿದ್ದಾರೆ. ಮುಮ್ಮುಟ್ಟಿಯವರ ಒಡೆತನದ 'ಮುಮ್ಮುಟ್ಟಿ ಕಂಪನಿ' ಈ ಚಿತ್ರ ನಿರ್ಮಾಣಕ್ಕೆ ಹಣ ಹೂಡಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ.

ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ 'ಲೈಟರ್ ಬುದ್ಧ ಫಿಲಂಸ್' ಹಂಚಿಕೆ ಮಾಡುತ್ತಿದೆ.

Post a comment

No Reviews