ಕರ್ನಾಟಕ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ; ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ 36,772 ಕ್ಯುಸೆಕ್ ಒಳಹರಿವು ಇದ್ದು ನೀರಿನ ಮಟ್ಟ 113.40 ಅಡಿಗೆ ಏರಿಕೆಯಾಗಿದೆ.
ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ 36,772 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 113.40 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ. ನಿನ್ನೆ 110.60ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ, ಇಂದು 113.40 ಅಡಿಗೆ ತಲುಪಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ :
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 113.40 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 35.282 ಟಿಎಂಸಿ
ಒಳ ಹರಿವು – 36,772 ಕ್ಯೂಸೆಕ್
ಹೊರ ಹರಿವು – 2448 ಕ್ಯೂಸೆಕ್
Poll (Public Option)

Post a comment
Log in to write reviews