
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಕಳ್ಳರ ಉಪಠಳಕ್ಕೆ ಕಡಿವಾಣ ಹಾಕಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಅವರು ಮೇ24ರಂದು ಕೂಡ್ಲಿಗಿ DYSP ಕಚೇರಿಗೆ ತೆರಳಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ, ಮುಖಂಡ ಹೆಚ್.ವೀರಣ್ಣ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಮುಖಂಡರಾದ ಯು.ಪೆನ್ನಣ್ಣ, ಅನಂತೇಶ, ಕರಿಯಣ್ಣ , ಐಗಳ ಮಲ್ಲಾಪುರ ಕುಬೇರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. DYSPರವರ ಅನುಪಸ್ಥಿತಿಯಲ್ಲಿ, CPI ರವರು ಮನವಿ ಸ್ವೀಕರಿಸಿದರು.
Poll (Public Option)

Post a comment
Log in to write reviews