2024-12-24 06:38:26

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪುಷ್ಪ 2 ರಿಲೀಸ್‌ ಡೇಟ್‌ ಮುಂದಕ್ಕೆ: ಹೊಸ ಡೇಟ್‌ ಯಾವಾಗ

ಬೆಂಗಳೂರು: ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದು, ಚಿತ್ರವನ್ನು ಡಿಸೆಂಬರ್‌ 6 ಕ್ಕೆ ಬಿಡುಗಡೆಮಾಡಲು ನಿರ್ಧರಿಸಿದೆ.
ಈ ಹಿಂದೆ ಪುಷ್ಪ 2 ಚಿತ್ರವನ್ನು ಆಗಷ್ಟ್‌ 15 ರಂದು ಬಿಡುಗಡೆಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಸಿನಿಮಾ ಚಿತ್ರೀಕರಣದ ಕೆಲಸಗಳು ಇನ್ನೂ ಬಾಕಿ ಉಳಿದಿರುವುದರಿಂದ ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದೇವೆ ಎಂದು ಚಿತ್ರ ತಂಡ ವಿವರಿಸಿದೆ.
ಈ ವಿಷಯದ ಕುರಿತು ತನ್ನ ಇನ್ಸ್ಟಾಗ್ರಾಮ್‌ ಅಧಿಕೃತ ಖಾತೆಯುಲ್ಲಿ ಮೈತ್ರಿ ಮೂವೀಸ್‌ ನಿರ್ಮಾಣ ಸಂಸ್ಥೆ 'ನಾವು ನಿಮಗೆ ಅತ್ಯುತ್ತಮವಾದದ್ದನ್ನು ನೀಡಲು ಉದ್ದೇಶಿಸಿದ್ದೇವೆ. ದೊಡ್ಡ ಪರದೆಯ ಮೇಲೆ ಸ್ಮರಣೀಯ ಅನುಭವವನ್ನು ಪಡೆಯಲು ಕಾಯುವಿಕೆ ಹೆಚ್ಚಾಗುತ್ತಿದೆ. ಪುಷ್ಪ-ದಿ ರೂಲ್ 2024ರ ಡಿಸೆಂಬ‌ರ್ 6ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ' ಎಂದು ತಿಳಿಸಿದೆ.
ಈ ಸಿನಿಮಾವನ್ನು ಸುಕುಮಾರ್‌ ನಿರ್ದೇಶಿಸಿದ್ದಾರೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಫಹಾದ್‌ ಫಸಿಲ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Post a comment

No Reviews