ಪೂರ್ವಲಿಂಗ ಪತ್ತೆ & ಬ್ರೂಣ ಹತ್ಯೆ ಪ್ರಕರಣ: ಕೇಂದ್ರ ಆರೋಗ್ಯ ಇಲಾಖೆ ದಿಢೀರ್ ದಾಳಿ, ಆಸ್ಪತ್ರೆಯ ಸ್ಕ್ಯಾನಿಂಗ್ ಕೋಣೆ ಸೀಜ್ !

ಬಾಗಲಕೋಟೆ: ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಬ್ರೂಣ ಹತ್ಯೆ ದಂಧೆ ನಡೆಯುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎರಡು ಖಾಸಗಿ ಆಸ್ಪತ್ರೆಗಳ ಮೇಲೆ ಇಂದು (ಜುಲೈ 25)ರಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಂಡ ದಿಢೀರ್ ದಾಳಿ ನಡೆಸಿದೆ.
ಬ್ರೂಣ ಹತ್ಯೆ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ, ಹೊಸದಿಲ್ಲಿಯಿಂದ ಆರೋಗ್ಯ ಅಧಿಕಾರಿಗಳ ತಂಡ ಪಿಸಿಪಿಎನ್‌ಡಿಟಿ ಕಾಯ್ದೆ ಅನುಷ್ಠಾನ ಅಧಿಕಾರಿಗಳ ತಂಡದ ಸಾರಥ್ಯದಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲೆಯ ಬಾದಾಮಿಯ ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ! ಕವಿತಾ ಶಿವನಾಯ್ಕರ್ ಅವರ ಖಾಸಗಿ ಆಸ್ಪತ್ರೆ ಮತ್ತು ಟಿಪ್ಪು ನಗರದಲ್ಲಿರುವ ಶ್ರೀ ರೇಣುಕಾ ಆಸ್ಪತ್ರೆ ಹಾಗೂ ಜಿಲ್ಲೆಯ ಮಹಾಲಿಂಗಪುರದ ಡಾ!! ಆಶಾ ಮಲಘಾಣ ಅವರ ಆಸ್ಪತ್ರೆಗಳಲ್ಲಿ ತನಿಖೆ ನಡೆಸಿದ್ದಾರೆ. ಕೇಂದ್ರ ಆರೋಗ್ಯ ಅಧಿಕಾರಿಗಳ ತಂಡ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಯಾವುದೇ ಸುಳಿವು ನೀಡದೇ ಏಕಾಏಕಿ ದಾಳಿ ನಡೆಸಿ, ಎರಡೂ ಆಸ್ಪತ್ರೆಗಳ ಸ್ಕ್ಯಾನಿಂಗ್ ಮಷಿನಗಳನ್ನು ವಶಪಡಿಸಿಕೊಂಡು ಸ್ಕ್ಯಾನಿಂಗ್ ಮಷಿನ್ ಕೋಣೆಗಳನ್ನು ಸೀಜ್ ಮಾಡಿದೆ ಎನ್ನಲಾಗಿದೆ.
ಈ ದಾಳಿ ಬಗ್ಗೆ ದೂರು ದಾಖಲಿಸುವ ಸಾಧ್ಯತೆಯಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ಕೂಡಾ ಬಂದಿದೆ.
Poll (Public Option)

Post a comment
Log in to write reviews