2024-12-24 05:49:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪುರಿ ದೇಗುಲದ ರತ್ನ ಭಂಡಾರ ಓಪನ್

ಪುರಿ: ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ಅಪಾರ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಡಲಾಗಿರುವ, ‘ರತ್ನ ಭಂಡಾರ’ ಎಂದು ಕರೆಯಲಾಗುವ ಕೋಣೆಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು.

ರತ್ನ ಭಂಡಾರದ ದುರಸ್ತಿ ಮತ್ತು ಆಭರಣಗಳ ಮೌಲ್ಯಮಾಪನದ ಉದ್ದೇಶದಿಂದ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಭಾನುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅಧಿಕಾರಿಗಳು ಮತ್ತು ದೇಗುಲದ ಮುಖ್ಯಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಸಿ ಬಳಿಕ ಮಧ್ಯಾಹ್ನ 1.28ಕ್ಕೆ ಭೀತರ್ ಭಂಡಾರ (ಒಳ ಕೋಣೆ) ಮತ್ತು ಬಾಹರ್‌ ಭಂಡಾರ್‌ (ಹೊರ ಕೋಣೆ) ಎರಡನ್ನೂ ತೆರೆಯಲಾಯಿತು.

ಹೊರ ಕೋಣೆಯಲ್ಲಿ ಪುರಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರಿಗೆ ವಿಶೇಷ ದಿನಗಳಂದು ಪೂಜೆಗೆ ಬಳಸುವ ಚಿನ್ನಾಭರಣ ಇಡಲಾಗಿದ್ದು, ಅದರ ದ್ವಾರವನ್ನು ಕಾಲಕಾಲಕ್ಕೆ ತೆರೆಯಲಾಗುತ್ತದೆ. ಆದರೆ ಒಳ ಕೋಣೆಯ ದ್ವಾರವನ್ನು 1978ರ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಯಿತು. ಈ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ.

ಇವುಗಳ ಮೌಲ್ಯ ಸಾವಿರಾರು ಕೋಟಿ ರು. ಇರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ 1978ರಲ್ಲಿ ಭಂಡಾರ ತೆರೆಯಲಾಗಿತ್ತಾದರೂ ಅದರಲ್ಲಿನ ವಸ್ತುಗಳನ್ನು ನಿಖರವಾಗಿ ಲೆಕ್ಕ ಹಾಕಿರಲಿಲ್ಲ.

ಈ ಎರಡೂ ಕೋಣೆಯಲ್ಲಿ ಸಂಗ್ರಹಿಸಲಾದ ಚಿನ್ನಾಭರಣಗಳನ್ನು ಹೊರತೆಗೆದು ಸಾಗಿಸಲು ವಿಶೇಷ 4.5 ಅಡಿ ಉದ್ದ, 2.5 ಅಡಿ ಎತ್ತರ ಮತ್ತು 2.5 ಅಡಿ ಅಗಲದ ಮರದ ಬಾಕ್ಸ್‌ ಸಿದ್ಧಪಡಿಸಲಾಗಿದ್ದು, ಅದರಲ್ಲಿ ತುಂಬಿ ನಂತರ ವಿಶೇಷ ತಾತ್ಕಾಲಿಕ ಭಧ್ರತಾ ಕೋಣೆಯೊಂದರಲ್ಲಿ ಇಡಲಾಗುವುದು. ನಂತರ ಸರ್ಕಾರದ ಅನುಮೋದನೆ ಬಳಿಕ ಈ ಚಿನ್ನಾಭರಣಗಳ ಮೌಲ್ಯಮಾಪನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಗುಲದ ರತ್ನ ಭಂಡಾರ ತೆರೆಯುವ ವಿಷಯ ಇತ್ತೀಚೆಗೆ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಹೊರಹೊಮ್ಮಿತ್ತು. ತಾನು ಅಧಿಕಾರಕ್ಕೆ ಬಂದರೆ ಕೋವಿಡ್‌ ವೇಳೆ ಮುಚ್ಚಲಾಗಿದ್ದ ಪುರಿ ದೇಗುಲದ 3 ಬಾಗಿಲು ಭಕ್ತರಿಗೆ ಮುಕ್ತಗೊಳಿಸುವ ಮತ್ತು ರತ್ನ ಭಂಡಾರ ತೆರೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅದರಂತೆ ಬಿಜೆಪಿ ಸರ್ಕಾರ ರಚನೆಯಾದ ದಿನವೇ ದೇಗುಲದ ಎಲ್ಲಾ 4 ಬಾಗಿಲು ತೆಗೆದು ಭಕ್ತರಿಗೆ ಮುಕ್ತಗೊಳಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ.

 

 

Post a comment

No Reviews