ಕನ್ನಡ ಚಿತ್ರರಂಗ ಹಿಂದಿನಿಂದಲೂ ಸವಾಲಿನ ಘಟ್ಟದಲ್ಲಿದ್ದು, ಅದು ಇಂದಿಗೂ ಕೂಡ ಅದೇ ಪರಿಸ್ಥಿತಿ ಎದುರಿಸುತ್ತಿದೆ. ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಹಿರಿಯ ದಿಗ್ಗಜ ನಟರಿಗೆ ಸಿನಿಮಾ ನಿರ್ಮಾಣ ಮಾಡಿ ಹಿಟ್ ಸಿನಿಮಾ ನೀಡಿದ ಕನ್ನಡ ಸಿನಿಮಾ ರಂಗದ ಹಿರಿಯ ನಿರ್ಮಾಪಕ ಎಂ ಎನ್ ಕುಮಾರ್( ಕೆ ಸಿ ಎನ್ ಕುಮಾರ್) ಅವರಿಗೆ ಈಗ ಸಂಕಷ್ಟವೋಂದು ಎದುರಾಗಿದೆ.
ಒಂದೇ ದಿನ ಒಂದೇ ಭಾಷೆಯ ಸಿನಿಮಾಗಳು ರಿಲೀಸ್ ಆದರೆ ಬ್ಲಾಕ್ ಆಫೀಸ್ ಅಲ್ಲಿ ಕ್ಲಾಶ್ ಆಗೋದು ಸಹಜ. ಅಂತಹದರಲ್ಲಿ ಒಂದೇ ಭಾಷೆಯ ಒಂದೇ ನಟನ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಯಾಗುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆ ನಿರ್ಮಾಪಕರ ಸ್ಥಿತಿ ಏನಾಗಬಹುದು ಎಂಬುದನ್ನ ಊಹಿಸಲು ಅಸಾಧ್ಯ.
ಪುನೀತ್ ಅಭಿನಯದ 2 ಸಿನಿಮಾಗಳು ಮೇ 10 ರಂದು ಒಟ್ಟೊಟ್ಟಿಗೆ ರಿ ರಿಲೀಸ್ ಆಗಲಿದ್ದು, ಇದು ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಎಂಎನ್ ಕುಮಾರ್ ನಿರ್ಮಾಣದ ಅಂಜನಿಪುತ್ರ ಮೇ 10 ರಂದು ರಿ ರಿಲೀಸ್ ಆಗಲು ಈ ಮೊದಲೇ ನಿಗದಿಯಾಗಿತ್ತು. ಆದರೆ ಅದೇ ದಿನ ಮೂಲತಃ ಹೈದ್ರಾಬಾದ್ ನಿರ್ಮಾಪಕರ ಸಾರಥ್ಯದಲ್ಲಿ ನಿರ್ಮಾಣವಾಗಿದ್ದಂತಹ ಕನ್ನಡದ ಪವರ್ ಸಿನಿಮಾವನ್ನು ಕೂಡ ಅದೇ ದಿನ ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ಅಂಜನಿಪುತ್ರ ನಿರ್ಮಾಪಕ ಫಿಲಂ ಚೇಂಬರ್ ಗೆ ದೂರನ್ನು ಕೂಡ ದಾಖಲಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪವರ್ ಸಿನಿಮಾದ ನಿರ್ಮಾಪಕರು ಪವರ್ ಸಿನಿಮಾವನ್ನ ಅದೇ ದಿನ ರೀ ರಿಲೀಸ್ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ೨ ಸಿನಿಮಾದ ನಿರ್ಮಾಪಕರ ನಡುವೆ ವೈಮನಸ್ಸು ಹೆಚ್ಚಾಗಿದ್ದು, ಇದನ್ನು ಕರ್ನಾಟಕ ವಾಣಿಜ್ಯ ಮಂಡಳಿ ಹೇಗೆ ಪರಿಹರಿಸುತ್ತದೆ ಎಂದು ಕಾದುನೋಡಬೇಕಿದೆ.
Post a comment
Log in to write reviews