ಸಿನಿ ಸ್ಟೈಲ್
ಪುತ್ರಿಯ ಜೊತೆಗೆ ಪುನೀತ್ ಸಮಾಧಿಗೆ ಪೂಜೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್

ಬೆಂಗಳೂರು : ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಇಂದಿಗೆ ಮೂರು ತುಂಬಿದೆ ಅಪ್ಪು ಪುಣ್ಯಸ್ಮರಣೆಯನ್ನು ಭಕ್ತಿ-ಭಾವಗಳಿಂದ ಕಂಠೀರವ ಸ್ಟುಡಿಯೋನಲ್ಲಿ ಆಚರಣೆ ಮಾಡಲಾಗುತ್ತಿದೆ.
ಅಪ್ಪು ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದೆ. ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ದೊಡ್ಮನೆ ಕುಟುಂಬ ಸದಸ್ಯರು ಆಗಮಿಸಿ ಇಂದು ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕುಟುಂಬ, ಪುನೀತ್ರ ಪತ್ನಿ ಅಶ್ವಿನಿ ಮತ್ತು ಕಿರಿ ಮಗಳೊಟ್ಟಿಗೆ ಆಗಮಿಸಿ ಪೂಜೆ ನೆರವೇರಿಸಿದ್ದಾರೆ. ಯಾವುದೇ ಆಡಂಭರ ಇಲ್ಲದೆ ಸರಳವಾಗಿ ಪೂಜೆ ಮಾಡಿ ಕೈ ಮುಗಿದ್ದಾರೆ ಅಪ್ಪು ಕುಂಟುಬ.
Poll (Public Option)

Post a comment
Log in to write reviews