ಕರ್ನಾಟಕ
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಿಸಿದ ಪುನೀತ್ ಕೆರೆಹಳ್ಳಿ ತಂಡ

ಮಂಡ್ಯ :ಬೆಂಗಳೂರಿನ ಕಸಾಯಿಖಾನೆಗೆ ಆಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ತಂಡ ರಕ್ಷಣೆ ಮಾಡಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಐಬಿ ಸರ್ಕಲ್ ಬಳಿ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ನಂತರ ಪುನೀತ್ ಕೆರೆಹಳ್ಳಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ವಾಹನದ ಚಾಲಕ ಮನ್ಸೂರು ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈಚರ್ ವಾಹನದಲ್ಲಿ ಆಕ್ರಮವಾಗಿ 30ಕ್ಕೂ ಹೆಚ್ಚು ಗೋವುಗಳ ಸಾಗಾಟ ಮಾಡಲಾಗುತ್ತಿತ್ತು. ಇದರ ಸುಳಿವು ದೊರೆತ ಪುನೀತ್ ಹಾಗೂ ತಂಡದವರು ಮದ್ದೂರಿನ ಐಬಿ ಸರ್ಕಲ್ ಬಳಿ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews