ಉಪಯುಕ್ತ ಮಾಹಿತಿ
ನಾಳೆ CCTV ಕಣ್ಗಾವಲಲ್ಲಿ PSI ಪರೀಕ್ಷೆ: ಎಲೆಕ್ಟ್ರಿಕಲ್ ಡಿವೈಸ್ ತರದಂತೆ ಕಮಿಷನರ್ ಸೂಚನೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ನಾಳೆ (07-10-2024) 52 ಸೆಂಟರ್‌ಗಳಲ್ಲಿ ಪಿಎಸ್‌ಐ (PSI) ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಸೆಂಟರ್‌ಗಳಲ್ಲಿ ಸಿಸಿಟಿವಿ ಹಾಕಲಾಗಿದೆ. ಕೆಇಇ ಅವರು ಪರೀಕ್ಷೆಯನ್ನ ಕಂಡಕ್ಟ ಮಾಡಿದ್ದಾರೆ. ಸಿಬ್ಬಂದಿಗಳನ್ನ ಅವರೆ ನಿಯೋಜನೆ ಮಾಡಿಕೊಳ್ಳುತ್ತಾರೆ. ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಡಿವೈಸ್, ವಾಚ್ ಮೊಬೈಲ್ ಏನೂ ತರಬಾರದು ಎಂದು ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:30 ರವೆಗೆ ಪರೀಕ್ಷೆ ನಡೆಯಲಿದೆ. ಸ್ಪರ್ಧಿಗಳು ಎರಡು ಗಂಟೆ ಮೊದಲೇ ಸೆಂಟರ್‌ಗಳಿಗೆ ಬರಬೇಕು. ಪ್ರತಿ ಸೆಂಟರ್‌ಗಳಲ್ಲಿ ಹಿರಿಯ ಅಧಿಕಾರಿಗಳು ಇರುತ್ತಾರೆ. ಮಾಲ್ ಪ್ರ್ಯಾಕ್ಟಿಸ್ ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
Poll (Public Option)

Post a comment
Log in to write reviews