
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ತಾಯೂರು ಗ್ರಾಮದಲ್ಲಿ ಕಾರ್ಖಾನೆಯ ಕಲುಷಿತ ನೀರಿನಿಂದ ಬೇಸತ್ತ ರೈತರು. ವರುಣ ಕ್ಷೇತ್ರ ವ್ಯಾಪ್ತಿಯ ತಾಯೂರು ಗ್ರಾಮದಲ್ಲಿ ಕಾರ್ಖಾನೆ ಹರಿಯುತ್ತಿರುವ ರಾಸಾಯನಿಕಯುಕ್ತ ನೀರಿನಿಂದಾಗಿ ಜಾನುವಾರುಗಳು ಸಾವು ಬದುಕಿನ ನಡುವೆ ಹೊಡೆದಾಡುತ್ತಿವೆ. ಇಷ್ಟೇ ಅಲ್ಲದೆ ರೈತರ ಜಮೀನು ಮತ್ತು ಕಾಲುವೆಯಲ್ಲಿ ರಾಸಾಯನಿಕಯುಕ್ತ ನೀರು ಹರಿದು ಬರುತ್ತಿರುವ ಕಾರಣ ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಮತ್ತು ಕಳೆದ ಹತ್ತು ವರ್ಷಗಳಿಂದ ರೈತರಿಗೆ ಯಾವುದೇ ರೀತಿಯ ಬೆಳೆ ಬೆಳೆಯಲು ಅಗುತ್ತಿಲ್ಲ. ಇದರಿಂದ ಜನ, ಜಾನುವಾರುಗಳು ಸತ್ತರೆ ಕಾರ್ಖಾನೆ ಮಾಲೀಕರೇ ಹೊಣೆ ಎಂದು ಅವರ ವಿರುದ್ದ ಪ್ರತಿಭಟನೆ ನಡೆಸಿದರು. ಆದರು ಕ್ಯಾರೇ ಎನ್ನದ ಮಾಲೀಕರು ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
Poll (Public Option)

Post a comment
Log in to write reviews