
ಮೈಸೂರು : ನಗರದ ಗೋಕುಲಮ್ ರಸ್ತೆಯಲ್ಲಿರುವ ಪ್ರತಿಷ್ಠಿತ ಬಿ ಎಮ್ ಎಲ್, ಮಾಲ್ ನಲ್ಲಿ ನಿನ್ನೆರಾತ್ರಿ ಬ್ಯಾಡ್ ನ್ಯೂಸ್ ಚಿತ್ರವು ಡಿಆರ್‍ಸಿ ಫಿಲಂಸ್ ನಲ್ಲಿ ರಿಲೀಸ್ ಆಗಿದ್ದು, ಫಿಲಂ ಪ್ರಾರಂಭದಲ್ಲಿ ಒಂದೇ ಮಾತರಂ ಹಾಡು ಬರುವಾಗ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಘೋಷಣೆ ಕೂಗಿದ ನಂತರ ಪರ ವಿರೋಗಳ ಮಾತಿನ ಚಕಮಕಿ ಜೋರಾಗಿ ನಡೆದಿದ್ದು, ಸ್ಥಳಕ್ಕೆ ಡಿಆರ್‍ಸಿ ಫಿಲಂ ಸೆಕ್ಯೂರಿಟಿ ಹಾಗೂ ಪೊಲೀಸರು ಮಧ್ಯಸ್ಥಿಕೆ ವಹಿಸಿ ಘೋಷಣೆ ಕೂಗಿದವರನ್ನು ವಶಕ್ಕೆ ಪಡೆದಿದ್ದಾರೆ.
ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‍ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆಯಲಿದೆ.
Poll (Public Option)

Post a comment
Log in to write reviews