2024-09-19 04:36:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಳ್ಳುಲು ಕೈದಿಗಳ ಯತ್ನ: 129 ಕೈದಿಗಳು ಸಾವು, 59 ಮಂದಿಗೆ ಗಾಯ!

ಕೈದಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ  ಗುಂಡಿನ ದಾಳಿ ನಡೆಸಲಾಗಿದ್ದು ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದರು. ಇನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿ ಉಸಿರುಗಟ್ಟಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ (DRC) ರಾಜಧಾನಿ ಮಕಾಲಾ ಕೇಂದ್ರ ಕಾರಾಗೃಹದ ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದು, ಅಲ್ಲಿ ಗುಂಡಿನ ದಾಳಿ ನಡೆಸಲಾಗಿತು. ಈ ದಾಳಿಯಲ್ಲಿ 129 ಕೈದಿಗಳು ಮೃತಪಟ್ಟಿದ್ದಾರೆ. ಹಾಗೂ 59 ಮಂದಿ ಗಾಯಗೊಂಡಿದ್ದು, ಉಪಪ್ರಧಾನಿ ಮತ್ತು ಆಂತರಿಕ ಮತ್ತು ಭದ್ರತಾ ಸಚಿವ ಜಾಕ್ವೆಮನ್ ಶಬಾನಿ, ತಾತ್ಕಾಲಿಕ ಸಾವಿನ ಸಂಖ್ಯೆ 129ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಮಕಾಲಾ ಕೇಂದ್ರ ಕಾರಾಗೃಹದಲ್ಲಿ ಹಲವು ಗಂಟೆಗಳ ಕಾಲ ಗುಂಡಿನ ಸದ್ದು ಕೇಳಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ಜುಲೈನಲ್ಲಿ ಸಚಿವ ಕಾನ್‌ಸ್ಟೆಂಟ್ ಮುತಂಬಾ ಅವರು ಜನಸಂದಣಿಯನ್ನು ಕಡಿಮೆ ಮಾಡಲು ಮಕಾಲಾ ಸೆಂಟ್ರಲ್ ಜೈಲಿನಲ್ಲಿರುವ 1,284 ಕೈದಿಗಳನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದರು.

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿಗಳ ಪ್ರಕಾರ, 1,500 ಕೈದಿಗಳ ಸಾಮರ್ಥ್ಯವನ್ನು ಹೊಂದಿದ್ದ ಜೈಲಿನಲ್ಲಿ 12,000ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ವಿಚಾರಣಾಧೀನ ಕೈದಿಗಳಾಗಿದ್ದಾರೆ.

2017ರಲ್ಲಿ ಸಂಘಟನೆಯೊಂದು ಜೈಲಿನ ಮೇಲೆ ದಾಳಿ ಮಾಡಿ ಅನೇಕ ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳುವಂತೆ ಮಾಡಿತ್ತು. ಮಕಾಲಾ ಸೆಂಟ್ರಲ್ ಜೈಲಿನಲ್ಲಿ ಹಿಂದೆ ಹಲವು ಜೈಲಿನಿಂದ ಪರಾರಿಯಾದ ಪ್ರಕರಣಗಳು ನಡೆದಿವೆ.

Post a comment

No Reviews