
ಜಮ್ಮು ಕಾಶ್ಮೀರದಲ್ಲಿ ನೆನ್ನೆ ನಡೆದ ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ನೆನ್ನೆ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರುವಾಗ ಅಸ್ವಸ್ಥಗೊಂಡಿದ್ದರು.
ಸದ್ಯ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಖರ್ಗೆಯವರು ಆರೋಗ್ಯ ವಿಚಾರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಣಿಗಾರಿಕೆ ಮತ್ತು ಮದ್ಯದ ಒಪ್ಪಂದಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೊರಗಿನವರಿಗೆ ಪ್ರಾಬಲ್ಯ ಸಾಧಿಸಲು ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಖರ್ಗೆ ಆರೋಪಿಸಿದರು. ಕೆಲಕಾಲ ಅವರನ್ನು ವೇದಿಕೆಯ ಮೇಲೆ ಕೂರಿಸಲಾಯಿತು. ಸ್ವಲ್ಪ ಹೊತ್ತು ಕುಳಿತ ನಂತರ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಂತರ ವೇದಿಕೆ ಮೇಲೆ ನಿಂತು ಭಾಷಣ ಆರಂಭಿಸಿ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ನಡೆಸುತ್ತೇವೆ ಎಂದರು.
Poll (Public Option)

Post a comment
Log in to write reviews