ಟಾಪ್ 10 ನ್ಯೂಸ್
100ಕ್ಕೂ ಹೆಚ್ಚು ವರ್ಕರ್ಸ್‌ಗಳಿಂದ ಟಿಬಿ ಡ್ಯಾಂ ಗೇಟ್ ಅಳವಡಿಸಲು ಸಿದ್ಧತೆ

ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra Dam) 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿದ್ದು, ಗೇಟ್‌ನ ಒಳ ಹರಿವನ್ನು ಸ್ಟಾಪ್ ಮಾಡಲು ಕಸರತ್ತು ನಡೆಯುತ್ತಿವೆ. ನಿನ್ನೆ ತಡ ರಾತ್ರಿನೇ ಕೊಪ್ಪಳದಿಂದ (Koppala) ಮತ್ತು ಹೊಸಪೇಟೆಯಿಂದ (Hosapete) ಬರಬೇಕಿದ್ದ ಸ್ಟಾಪ್‌ಲಾಗ್ ಗೇಟ್‌ಗಳಿಗೆ ಮಳೆ ಅಡ್ಡಿ ಉಂಟು ಮಾಡಿದೆ. ಇದರಿಂದಾಗಿ ಮೊದಲ ದಿನವೇ ಸಂಜೆ ಸ್ಟಾಪ್‌ಲಾಗ್ ಗೇಟ್ (Stoplog Gate) ಕುರಿಸುವ ಯತ್ನ ನಡೆಸಲು ಸಿದ್ಧತೆ ಆಗಿತ್ತು. ಆದರೆ ಮಳೆ ಅಡ್ಡಿಪಡಿಸಿದ ಹಿನ್ನೆಲೆ ಇಂದು ನೂರಕ್ಕೂ ಹೆಚ್ಚು ವರ್ಕಸ್‌ಗಳಿಂದ ಸ್ಟಾಫ್‌ಲಾಗ್ ಗೇಟ್ ಅಳವಡಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಕೊನೆಗೂ ಇಂದು ಬೆಳಗ್ಗೆ ತುಂಗಭದ್ರಾ ಜಲಾಶಯಕ್ಕೆ ಸ್ಟಾಪ್ ಲಾಗ್ ಗೇಟ್ ಬಂದು ತಲುಪಿದೆ. ಬಳ್ಳಾರಿಯ ಜಿಂದಾಲ್‌ನಿಂದ ಒಂದು ಸ್ಟಾಪ್ ಲಾಗ್ ಗೇಟ್ಅನ್ನು ತರಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಸ್ಟಾಪ್ ಲಾಗ್ ಗೇಟ್ ತರಲಾಗಿದ್ದು, ಇನ್ನೂ ನಾರಾಯಣ ಇಂಜಿನಿಯರಿಂಗ್, ಹಿಂಸೂಸ್ತಾನ್ ಎಂಜನಿಯರ್ಸ್ಗಳಿಂದ ಸ್ಟಾಪ್ ಲಾಗ್ ಗೇಟ್‌ಗಳು ಆಗಮಿಸಬೇಕಿದೆ.
Poll (Public Option)

Post a comment
Log in to write reviews