ಪ್ರಜ್ವಲ್ ವಿಮಾನ ಟಿಕೆಟ್ ರದ್ದು: ಮೇ 15 ರಂದು ಪ್ರಜ್ವಲ್ ಭಾರತಕ್ಕೆ ಬರೋದು ಡೌಟ್

ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಮೇ15ರಂದು ಬೆಂಗಳೂರಿಗೆ ಬರಲು ಬುಕ್ ಮಾಡಿದ್ದ ವಿಮಾನದ ಟಿಕೆಟ್ ಅನ್ನೂ ರದ್ದುಗೊಳಿಸಿದ್ದಾರೆ. ಹೀಗಾಗಿ, 2 ದಿನದಲ್ಲಿ ಪ್ರಜ್ವಲ್ ಬರಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದ್ದು, ಸಂಸದನನ್ನು ಪತ್ತೆ ಹಚ್ಚುವುದು ಎಸ್ ಐ ಟಿಗೆ ದೊಡ್ಡ ಸವಾಲಾಗಿದೆ .
ಅಧಿಕಾರಿಗಳು ತಾಂತ್ರಿಕ ಕಾರ್ಯಾಚರಣೆ ಸೇರಿ ವಿವಿಧ ಆಯಾಮಗಳಲ್ಲಿ ಪ್ರಜ್ವಲ್ ವಿದೇಶದಲ್ಲಿ ನೆಲೆಸಿರುವ ಪ್ರದೇಶ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಮೇ 15ರಂದು ಜರ್ಮನಿಯಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ರಿಟರ್ನ್ ಏರ್ ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದೆ. ಇದೀಗ ದಿಢೀರ್ ಆಗಿ ಟಿಕೆಟ್ ರದ್ದುಗೊಳಿಸಿದ್ದಾರೆ. ಮೊದಲು ಮೇ 3ರಂದು ಬುಕ್ ಮಾಡಿದ್ದ ವಿಮಾನದ ಟಿಕೆಟ್ ಅನ್ನು ಮೇ 15ಕ್ಕೆ ಮುಂದೂಡಿದ್ದರು. ಇದೀಗ ಈ ಏರ್ ಟಿಕೆಟ್ ದಿಢೀರ್ ರದ್ದುಗೊಳಿಸಿದ್ದಾರೆ. ಎಸ್‌ಐಟಿಯನ್ನು ದಿಕ್ಕು ತಪ್ಪಿಸಲು ಪ್ರಜ್ವಲ್ ಈ ರೀತಿ ಮಾಡುತ್ತಿದ್ದಾರಾ ಅಥವಾ ಸದ್ಯದ ಬೆಳವಣಿಗೆ ಗಮನಿಸಿ ಟಿಕೆಟ್ ರದ್ದು ಮಾಡಿದ್ದಾರಾ ಎಂಬ ಇತ್ಯಾದಿ ಪ್ರಶ್ನೆಗಳು ತನಿಖಾಧಿಕಾರಿಗಳಲ್ಲಿ ಹುಟ್ಟಿಕೊಂಡಿವೆ
Poll (Public Option)

Post a comment
Log in to write reviews