ಬೆಂಗಳೂರು: ಪ್ರಜ್ವಲ್ ನನ್ನು ಬಂಧಿಸಿರುವ ಎಸ್ಐಟಿ, ಸಂತ್ರಸ್ತ ಮಹಿಳೆಯರಲ್ಲಿ ಬಲ ತುಂಬುವ ಕೆಲಸವನ್ನು ಮಾಡಿದೆ.
ಅತ್ಯಾಚಾರ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್‌ನನ್ನು ಶುಕ್ರವಾರ ಬೆಳಗಿನ ಜಾವ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡ ರಾತ್ರಿ ಬಂದು ಇಳಿದು ಪ್ರಜ್ವಲ್ ಗೆ ಇಮಿಗ್ರೇಷನ್ ಅಧಿಕಾರಿಗಳು ಭದ್ರತಾ ತಪಾಸಣೆ ಮುಗಿಸಿದ ನಂತರ ಎಸ್ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದರು.
ಬಂಧಿಸಲು ಬಂದ ಅಧಿಕಾರಿಗಳನ್ನು ನೋಡಿ ಪ್ರಜ್ವಲಗೆ ಶಾಕ್ ಕಾದಿತ್ತು. ಯಾಕೆಂದರೆ ಎಸ್ಐಟಿ ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಬಂದಿದ್ದರು. ಒಬ್ಬ ಮಹಿಳಾ ಇನ್ಸ್ಪೆಕ್ಟರ್, ಒಬ್ಬ ಮಹಿಳಾ ಸಬ್ ಇನ್ಸ್ ಪೆಕ್ಟರ್ ಹಾಗೂ ನಾಲ್ಕು ಮಹಿಳಾ ಕಾನ್ಸಟೇಬಲ್ ಗಳು ನೇತ್ರತ್ವದಲ್ಲಿ ಬಂಧಿಸಿ ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ಇಡಿ ಬಂಧನ ಪ್ರಕ್ರಿಯೆಯಲ್ಲಿ ಕಾರು ಚಾಲಕ ಹೊರತು ಪಡಿಸಿ ಪುರುಷ ಅಧಿಕಾರಿ ಇರಲೇ ಇಲ್ಲ.
ಇಷ್ಟಕ್ಕೂ, ಇದು ಎಸ್ಐಟಿ ಪೊಲೀಸರು ಪ್ರಜ್ವಲ್ಗೆ ಅವಮಾನ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡರಾ ಎಂಬುದು ಪ್ರಶ್ನೆಯಾಗಿದೆ. ಆದರೆ ಮುಖ್ಯವಿಚಾರ ಏನೆಂದರೆ, ಇಲ್ಲಿಯವರೆಗೆ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ ಎಂಬುದು ಸುದ್ದಿ ಇದೆಯಾದರೂ, ಎಸ್ಐಟಿ ಮುಂದೆ ದೂರು ನೀಡಿದ್ದು ನಾಲ್ಕು ಮಹಿಳೆಯರು ಮಾತ್ರ. ಪೊಲೀಸ್ ಅಧಿಕಾರಿಗಳ ಸಾಕಷ್ಟು ಪ್ರಯತ್ನ ನಡೆಸಿದರೂ ಸಂತ್ರಸ್ಥೆಯರು ದೂರು ನೀಡಲು ಮುಂದೆ ಬರುತ್ತಿಲ್ಲ. ಕಾರಣ ಈ ಮೂಲಕ ಮಹಿಳೆಯರಲ್ಲಿ ನೈತಿಕತೆ ಹಾಗೂ ಧೈರ್ಯ ತುಂಬಲು ಈ ಕ್ರಮ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರು ವಿಶ್ಲೇಷಿಸುತ್ತಿದ್ದಾರೆ.
ಹೆಣ್ಣನ್ನು ಕೇವಲವಾಗಿ ಕಂಡು ದೇಶಕ್ಕೆ ಮುಜುಗರ ತಂದ ಪ್ರಜ್ವಲನಿಗೆ ಈ ಮೂಲಕ ಪೋಲಿಸರು ಪಾಠ ಕಲಿಸಿದ್ದಾರೆ
Post a comment
Log in to write reviews