
ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌಜ೯ನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ಸಹ ಬೆಂಗಳೂರಿಗೆ ಬರುವುದು ಅನುಮಾನವಾಗಿದೆ.
ಪ್ರಜ್ವಲ್ ರೇವಣ್ಣ ಜಮ೯ನ್ ನ ಮ್ಯುನಿಚ್ ನಿಂದ ಬೆಂಗಳೂರಿಗೆ ಬುಕ್ ಆಗಿದ್ದ ವಿಮಾನ ಟಿಕೆಟ್ ರದ್ದು ಗೊಳಿಸಲಾಗಿದೆ. ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ಈಗಾಗಲೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ಲುಪ್ತಾನ್ಸಾ ವಿಮಾನದಲ್ಲಿ ಬುಕ್ ಆಗಿದ್ದ ಟಿಕೆಟ್ ಅನ್ನು ನಾಲ್ಕು ದಿನಗಳ ಹಿಂದೆಯೇ ರದ್ದು ಮಾಡಿದರೂ ಇನ್ನು ಅದರ ಹಣ ವಾಪಸ್ ಪಡೆಯದೆ ಪ್ರಜ್ವಲ್ ಗೊಂದಲ ಮೂಡಿಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೊಡಿರಬಹುದು ಎನ್ನಲಾಗಿದೆ.
Poll (Public Option)

Post a comment
Log in to write reviews