
ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಧ್ವನಿ ಪರೀಕ್ಷೆ ಬಳಿಕ ಈಗ ಅಂಗಾಂಗ ಪರೀಕ್ಷೆಯ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ಡ್ರೈವ್ ಬಹಿರಂಗವಾಗಿದ್ದವು. ಈ ವಿಡಿಯೋಗಳಲ್ಲಿ ಧ್ವನಿ ಮಾತ್ರವಲ್ಲದೆ ಪುರುಷನೊಬ್ಬನ ಕೈ ಹಾಗೂ ಸೊಂಟದ ಕೆಳಗಿನ ಅಂಗಗಳು ವಿಡಿಯೋದಲ್ಲಿ ಕಾಣಿಸಿದ್ದವು. ಹೀಗಾಗಿ ಆ ವಿಡಿಯೋಗಳಲ್ಲಿ ಕಾಣುವ ಪುರುಷನ ಪತ್ತೆಗೆ ಎಸ್‌ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ಅಶ್ಲೀಲ ವಿಡಿಯೋಗಳಲ್ಲಿನ ಅಪರಿಚಿತ ವ್ಯಕ್ತಿಯ ಅಂಗಗಳಿಗೂ ಮಾಜಿ ಸಂಸದ ಪ್ರಜ್ವಲ್ ಅವರ ಅಂಗಗಳಿಗೂ ಹೋಲಿಕೆ ಮಾಡಲು ತನಿಖಾ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್‌ನ ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ವಿದೇಶಿ ತಜ್ಞರ ನೆರವು ಪಡೆಯಲು ಎಸ್‌ಐಟಿ ಮುಂದಾಗಿದೆ.
Poll (Public Option)

Post a comment
Log in to write reviews