
ಬೆಂಗಳೂರು: ಲೈಂಗಿಕ ಪ್ರಕರಣದ ಆರೋಪದಲ್ಲಿ ಎಸ್‌ಐಟಿ ಬಲೆಗೆ ಬಿದ್ದಿರುವ ಪ್ರಜ್ವಲ್ ರೇವಣ್ಣರನ್ನ ಇಂದು ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ನಾಳೆ ಪ್ರಜ್ವಲ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಇವತ್ತೇ ಪ್ರಜ್ವಲ್‌ರನ್ನ ಹಾಸನಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಹಾಸನದ ಹೊಳೆನರಸೀಪುರ ಮತ್ತು ಬಸವನಗುಡಿಯಲ್ಲಿ ಸ್ಥಳ ಮಹಜರ್ ಬಾಕಿ ಇರುವ ಹಿನ್ನೆಲೆಯಲ್ಲಿ ಎಸ್‌ಐಟಿ ಇವತ್ತೇ ಸ್ಥಳ ಮಹಜರ್ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿವೆ. ಈ ಹಿಂದೆ ಪ್ರಜ್ವಲ್‌ರನ್ನ ಕಸ್ಟಡಿಗೆ ಪಡೆಯುವ ವೇಳೆ ಸ್ಥಳ ಮಹಜರು ಮಾಡಬೇಕು ಹೀಗಾಗಿ ಹೆಚ್ಚಿನ ಕಾಲಾವಕಾಶ ಕೇಳಿದ್ದ ಎಸ್‌ಐಟಿ, ಈ ಪ್ರಕ್ರಿಯೆಯನ್ನ ಇಂದೇ ಪೂರ್ಣಗೊಳಿಸುವ ಒತ್ತಡದಲ್ಲಿದೆ. ಇನ್ನು ನಾಳೆ ಪ್ರಜ್ವಲ್ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮತ್ತೆ ಪ್ರಜ್ವಲ್‌ರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಹೀಗಾಗಿ ಸ್ಥಳ ಮಹಜರು ಪ್ರಕ್ರಿಯೆಗಳನ್ನ ಇವತ್ತೇ ಪೂರ್ಣಗೊಳಿಸುವ ಸಾಧ್ಯತೆ ಇದೆ. ಈ ನಡುವೆ ಇಂದು ಬೆಳಗ್ಗೆ ಪ್ರಜ್ವಲ್ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳ ತಂಡ ವೈದ್ಯಕೀಯ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು.
Poll (Public Option)

Post a comment
Log in to write reviews