
ಶಿವಮೊಗ್ಗ: ಮೇ31 ಕ್ಕೆ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ತನಿಖೆಗೆ ಹಾಜರಾಗುತ್ತೇನೆಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಇದರ ಬೆನ್ನಲ್ಲೇ ಮೇ.30 ರಂದು ಪ್ರಗತಿಪರ ಸಂಘಟನೆ, ಹಾಸನ ಚಲೋ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಪ್ರಜ್ವಲ್ ನನ್ನು ಸರ್ಕಾರ ಬಂಧಿಸದೆ ವಿಳಂಭಿಸುತ್ತಿರುವುದನ್ನ ಖಂಡಿಸಿ ಹಾಸನ ಚಲೋ ನಡೆಸಲಾಗುತ್ತಿದೆ ಎಂದು ವಕೀಲ ಶ್ರೀಪಾಲ್ ಶಿವಮೊಗ್ಗದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ರೈತ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಗಳು, ಸೇರಿ ನೂರಾರು ಸಂಘಟನೆಯ ನೆತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಶ್ರೀಪಾಲ್ ತಿಳಿಸಿದ್ದಾರೆ.
ನಿನ್ನೆ ಪ್ರಜ್ವಲ್ ರೇವಣ್ಣ ವಿಡೊಯೋದಲ್ಲಿ ಮಾತನಾಡಿ, ದಾಷ್ಟ್ಯತನ ಮೆರೆದಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣವೊಂದೆ ಅಲ್ಲ, ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.
ನಮ್ಮ ಕಾನೂನುಗಳು ಬಡವರಿಗೆ ಮಾತ್ರ ಹೇರಿಕೆಯಾಗುತ್ತಿದೆ. ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಕಠಿಣವಾದ ಕ್ರಮ ಇದ್ದರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇನ್ನಾದರೂ ಪ್ರಜ್ವಲ್ ರೇವಣ್ಣ ತನಿಖೆಗೆ ಒಳಗಾಗದಿರುವದನ್ನ ಗಮನಿಸಿದರೆ, ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂಬ ಅನುಮಾನಗಳು ಮೂಡುತ್ತದೆ ಎಂದು ವಕೀಲ ಶ್ರೀಪಾಲ್ ಆರೋಪಿಸಿದರು.
Poll (Public Option)

Post a comment
Log in to write reviews