ಟಾಪ್ 10 ನ್ಯೂಸ್
ಹೆಚ್ಚಿನ ತನಿಖೆಗಾಗಿ ಪ್ರಜ್ವಲ್ ಜೂನ್ 10ರ ವರೆಗೆ ಮತ್ತೆ ಎಸ್‌ಐಟಿ ಕಸ್ಟಡಿಗೆ

ಎಸ್‌ಐಟಿ ವಶದಲ್ಲಿ ತನಿಖೆಗೆ ಒಳಗಾಗುತ್ತಿರುವಂತ ಪ್ರಜ್ವಲ್ ರೇವಣ್ಣ ಅವರನ್ನು, ಹೆಚ್ಚಿನ ತನಿಖೆಗಾಗಿ ಜೂನ್.10ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು, ಅದರಂತೆ ಇಂದು ನ್ಯಾಯಾಯಲದ ಮುಂದೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನು ಹಾಜರುಪಡಿಸಿದ್ದಲ್ಲದೆ ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೇಳಿತ್ತು. ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ ಜೂನ್ 10 ರ ವರೆಗೆ ಎಸ್ಐಟಿ ಕಸ್ಟಡಿಯಲ್ಲಿ ಮುಂದುವರಿಯುವಂತೆ ಆದೇಶಿಸಿದೆ.
Poll (Public Option)

Post a comment
Log in to write reviews