
ಕೊಲ್ಕತ್ತಾ: ಎರಡು ತಿಂಗಳ ಹಿಂದೆ ಮನೆಯಲ್ಲೇ ಕುಳಿತು ಚುನಾವಣೋತ್ತರ ಸಮೀಕ್ಷೆಗಳನ್ನು ತಯಾರಿಸಿರುತ್ತಾರೆ. ಆದರೆ ಅವುಗಳಲ್ಲಿ ಯಾವುದೇ ಸ್ಥಿರತೆ ಇರುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ಷೇಪಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗಳು ಪ್ರಕಟಿಸುತ್ತಿರುವ ಚುನಾವಣೋತ್ತರ ಮತದಾನದ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹ ಮತದಾನೋತ್ತರ ಸಮೀಕ್ಷೆಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಸಮೀಕ್ಷೆಗಳನ್ನು ಪ್ರದರ್ಶಿಸುತ್ತಿರುವ ಮಾಧ್ಯಮಗಳ ನಡೆಯನ್ನು ಟೀಕಿಸಿದ್ದಾರೆ. ಹಾಗೆಯೇ ನಾವು 2016, 2019 ಹಾಗೂ 2021ರಲ್ಲಿ ಚುನಾವಣೋತ್ತರ ಸಮೀಕ್ಷೆ ನಡೆಸಿರುವುದನ್ನು ನೋಡಿದ್ದೇವೆ. ಯಾವ ಸಮೀಕ್ಷೆಯೂ ನಿಜವಾಗಿಲ್ಲ ಎಂದು ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳನ್ನು ಎರಡು ತಿಂಗಳ ಹಿಂದೆಯೇ ಮಾಧ್ಯಮಗಳಿಗೆ ಉಣಿಸಲು ಮನೆಯಲ್ಲಿಯೇ ತಯಾರಿಸಲಾಗಿದೆ. ಅವುಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
Poll (Public Option)

Post a comment
Log in to write reviews