ಪ್ರಾಣದಷ್ಟು ಪ್ರೀತಿ ಇಟ್ಟಿದ್ದ ಸೆಲಬ್ರೆಟೀಸ್ ಪ್ರಾಣ ತೆಗೆದ "ಪೊರ್ಕಿ" ಗ್ಯಾಂಗ್!

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಹತ್ಯೆಗೆ ಒಳಗಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ದರ್ಶನ್ ಅವರ ಅಪ್ಪಟ ಅಭಿಮಾನಿ ಅನ್ನೋ ವಿಷಯ ನಿಜಕ್ಕೂ ಕರಳು ಕಿವುಚುವಂತದ್ದು. ಅದರಲ್ಲೂ ಸಾವಿಗೀಡಾದ ರೇಣುಕಾ ತನ್ನ ನೆಚ್ಚಿನ ನಟ ದರ್ಶನ್ ಮೇಲೆ ಬೆಟ್ಟದಷ್ಟು ಪ್ರೀತಿ, ಅಭಿಮಾನ ಬೆಳಸಿಕೊಂಡಿದಂತೆ. ಅದಕ್ಕೆ ಪ್ರಮುಖ ಸಾಕ್ಷಿಯೇ ಆತನ ಕೈ ಮೇಲಿದ್ದ "ಸೆಲಬ್ರೆಟೀಸ್" ಅನ್ನೋ ಟ್ಯಾಟೋ. ನಿಮಗೆ ಗೊತ್ತಿರಲಿ ನಟ ದರ್ಶನ್ ತನ್ನ ಅಭಿಮಾನಿಗಳನ್ನ ಯಾವತ್ತು ಬರಿ ಅಭಿಮಾನಿಗಳು ಎಂದು ಕರೆಯಲಿಲ್ಲ. ಹಾಗೆ ಕರೆದರೆ ತನ್ನ ಹಾಗೂ ಅಭಿಮಾನಿಗಳ ನಡುವೆ ಅಂತರ ಉಂಟಾದಂತೆ ಭಾಸವಾಗುತ್ತೆ ಎಂದು, ನನ್ನ ಅಭಿಮಾನಿಗಳೇ ನನ್ನ ಸೆಲಬ್ರೆಟೀಸ್ ಗಳು ಎಂದು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದರು.
ಇದಕ್ಕೆ ಪೂರಕವಾಗಿ ದರ್ಶನ್ ಎದೆ ಮೇಲೆ ನನ್ನ ಸೆಲಬ್ರೆಟೀಸ್ ಎಂದು ಹಚ್ಚೆಯನ್ನೂ ಹಾಕಿಸಿಕೊಂಡಿದ್ದರು. ಆದ್ರೆ ಇದೀಗ ನೆಚ್ಚಿನ ಸ್ಟಾರ್ ಅಂತಾ ಆರಾಧಿಸುತ್ತಿದ್ದ ಸೆಲಬ್ರೆಟಿಯ ಪ್ರಾಣವನ್ನೇ ತೆಗೆಯಲು ಮುಂದಾಗಿದ್ದು ಮಾತ್ರ ನಿಜಕ್ಕೂ ಅಮಾನುಷ ಕೃತ್ಯವಾಗಿದೆ.
ಅಭಿಮಾನಿಗಳು ಮನೆ, ಸಂಸಾರ, ಹೆತ್ತವರನ್ನೂ ಬಿಟ್ಟು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನೆಚ್ಚಿನ ನಟರುಗಳನ್ನು ಆರಾಧಿಸುತ್ತಾರೆ. ಆದ್ರೆ ಅಂತಹ ಅಭಿಮಾನಿಯ ಪ್ರಾಣ ತೆಗೆಯಲು ಖುದ್ದಾಗಿ ನಟನೇ ಭಾಗಿಯಾಗಿದ್ದಾರೆ ಎಂಬ ವಿಷಯ ನಿಜಕ್ಕೂ ಅರಗಿಸಿಕೊಳ್ಳಲಾಗದಾಗಿದೆ.
Poll (Public Option)

Post a comment
Log in to write reviews