
ಮುಂಬೈ: ಮದ್ಯಯನ್ನು ಸೇವಿಸಿ ರಸ್ತೆಯಲ್ಲಿ ಓಡಾಡುತ್ತಿರುವ ಕುಡುಕರಿಗೆ ಸ್ಥಳಿಯ ಹೆಂಗಸರು ಪೊರೆಕೆಯಲ್ಲಿ ಥಳಿಸಿರುವ ಘಟನೆ ಮುಂಬೈನ ಲಾಲ್ಜಿ ಪದಾ, ಕಂಡಿವಲಿಯಲ್ಲಿ ನಡೆದಿದೆ.
ಮುಂಬೈನಲ್ಲಿ ಹಲವಾರು ಮಹಿಳೆಯರು ರಸ್ತೆಗಿಳಿದು ಮದ್ಯವ್ಯಸನಿಗಳನ್ನು ರಸ್ತೆಯಲ್ಲಿ ಥಳಿಸಿದ್ದಾರೆ. ಮಹಿಳೆಯರು ರಸ್ತೆಗಳಲ್ಲಿ ನಿರಂತರವಾಗಿ ಕಂಡುಬರುವ ಕುಡುಕರ ಕಾಟದಿಂದ ಬೇಸತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ ಅವರು ರಸ್ತೆಯಲ್ಲಿ ಕುಡಿದು ಓಡಾಡುತ್ತಿದ್ದವರಿಗೆ ಪೊರಕೆ ಪೂಜೆ ಮಾಡಿದ್ದಾರೆ.
ಕುಡುಕರ ಕಿರುಕುಳದಿಂದ ಹತಾಶರಾದ ಮಹಿಳೆಯರು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಥಳಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಜನರ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಿಳೆಯರನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.
Poll (Public Option)

Post a comment
Log in to write reviews