
ಬೆಂಗಳೂರು: ಮೊದಲಿನಿಂದಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುತಂತ್ರಕ್ಕೆ ಹೇಳಿ ಮಾಡಿಸಿದ ರಾಜಕಾರಣಿ. ಇದು ಹೊಸತೇನಲ್ಲ ಸಿಎಂ ಸಿದ್ದರಾಮಯ್ಯ ಮೊದಲಿಂದ ಮಾಡಿದ್ದೂ ಇದನ್ನೇ ಈಗ ಮಾಡುತ್ತಿರೋದು ಕೂಡ ಇದನ್ನೇ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬುದಾಗಿ ಕಿಡಿ ಕಾರಿದ್ದಾರೆ.
ಚುನಾವಣೆ ಸಮಯದಲ್ಲಿ ಬಣ್ಣದ ಮಾತನಾಡುತ್ತಾರೆ. ಆಗೆಲ್ಲ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮತದಾರರಿಗೆ ಭರವಸೆ ನೀಡಿ ಇದೀಗ ಪೆಟ್ರೋಲ್ ತೆರಿಗೆಯನ್ನು ಶೇಕಡಾ 29.84 ರಷ್ಟು ಮತ್ತು ಡೀಸೆಲ್ ತೆರಿಗೆಯನ್ನು ಶೇಕಡಾ 18.44 ರಷ್ಟು ಹೆಚ್ಚಿಸಿದ್ದಾರೆ. ಇದು ರಾಜ್ಯ ಸರ್ಕಾರವು ತನ್ನ ಯೋಜಿತವಲ್ಲದ, ತನ್ನ ತ್ಯಾಪೆ ಹಚ್ಚೋ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ಹಿಂಬಾಗಿಲಿನಿಂದ ಕಳ್ಳತನ ಮಾಡುತ್ತಿದೆ ಕಿಡಿಕಾರಿದ್ದಾರೆ.
Poll (Public Option)

Post a comment
Log in to write reviews