
ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಠಾಣೆಯಿಂದ ಧಾರವಾಡಕ್ಕೆ ಸ್ಥಳಾಂತರ ಮಾಡುವಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಸದ್ದಾಂ ಕಾಲಿಗೆ ಸಿ.ಪಿ.ಐ ಸಂಗಮೇಶ್ ಗುಂಡೇಟು ಹೊಡೆದಿದ್ದಾರೆ. ಆರೋಪಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆರೋಪಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಮಾತನಾಡಿದ ಹುಬ್ಬಳ್ಳಿ ಕಮಿಷನರ್ ರೇಣುಕಾ ಸುಕುಮಾರ್ ಆರೋಪಿಯನ್ನು ತನಿಕೆಗೆ ಕರೆತರಲು ನಮ್ಮ ಪೊಲೀಸ್ ತಂಡವನ್ನುಕಳುಹಿಸಿದ್ದೆವು. ಆತ ಇನ್ನೇನು ಜೀಪಿಗೆ ಹತ್ತಬೇಕು ಅನ್ನುವಷ್ಟರಲ್ಲಿ ಪೆನ್ ಚಾಕು ತೆಗೆದುಕೊಂಡು ನಮ್ಮ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾನೆ. ಆತನನ್ನು ತಡೆಯಲು ಹೋದ ನಮ್ಮ ಇನ್ಸ್ಪೆಕ್ಟರ್ ಮೇಲೆ ಸಹ ಹಲ್ಲೆ ನಡೆಸಿದ್ದಾನೆ. ಆತನನ್ನು ಕಂಟ್ರೋಲ್ ಮಾಡಲು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದೆವು. ಆದರೆ ಪರಿಸ್ಥಿತಿ ಕೈ ಮೀರಿದ ಕಾರಣ ಆತನ ಎಡ ಗಾಲಿಗೆ ಗುಂಡು ಹಾರಿಸಬೇಕಾಯಿತು ಎಂದು ಹೇಳಿದರು.
Poll (Public Option)

Post a comment
Log in to write reviews