
ಧಾರವಾಡ: ಮಾದಕ ವಸ್ತುಗಳ ಮಾರಟ ಮಾಡುತ್ತಿದ್ದ 11 ಜನರನ್ನು ಅವಳಿನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಮ್ಮದ ಆಲಿ, ದಾದಾಪೀಠ ಹಂಚಿನಮನಿ, ಪರಮೇಶ್ವರ ರೇವಡಿಹಾಳ, ಬಾಬಾಜಾನ ಮೆಹಬೂಬಸಾಬ, ಅಬುಜರ ಬಾಗರ, ಜಾಫರ ರಾಜಾಹುಸೇನ ಇರಾನಿ, ಸಾಧಿಕ್ ಬಾಬಾಹುಸೇನ್ ರಜಾಹುಸೇನ್, ಆಫ್ರಾಬ ಜೀವನಸಾಬ್, ಸಲ್ಮಾನ್ ಕಾಕರ್, ಮಹಮ್ಮದ್ ಆಸೀಫ್, ಸಚ್ಚಾದ ಸಯ್ಯದ್ ಬಂಧಿತರ ಆರೋಪಿಗಳು ಎಂದು ತಿಳಿದು ಬಂದಿದೆ.
ಬಂಧಿತರಿಂದ 1 ಕೆ.ಜಿ. 398 ಗ್ರಾಂ ಗಾಂಜಾ ಜೊತೆಗೆ ಒಂದೂವರೆ ಲಕ್ಷ ಮೌಲ್ಯದ 14 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅವಳಿನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಕ್ರಮ ಕೈಗೊಂಡು ಮಾದಕ ವಸ್ತುಗಳ ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದ್ದು, ಇನ್ನು ಕಾರ್ಯಚರಣೆ ಮುಂದುವರಿದಿದೆ .
Poll (Public Option)

Post a comment
Log in to write reviews