2024-12-24 05:45:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

2023 ಬ್ಯಾಚ್ ನ ಟ್ರೈನಿ IFS ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ 2023 ರ ಬ್ಯಾಚ್‌ನ ತರಬೇತಿ ನಿರತ ಭಾರತೀಯ ವಿದೇಶಾಂಗ ಸೇವೆ(IFS) ಅಧಿಕಾರಿಗಳನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಪರಸ್ಪರ ಗೌರವ ಮತ್ತು ಘನತೆಯೊಂದಿಗೆ ವಿಶ್ವದೊಂದಿಗೆ ಸಮಾನ ರೀತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರತಿಪಾದಿಸಿದರು.

ಪ್ರಶಿಕ್ಷಣಾರ್ಥಿಗಳು ಮೋದಿಯವರ ನಾಯಕತ್ವದಲ್ಲಿ ವಿದೇಶಾಂಗ ನೀತಿಯ ಯಶಸ್ಸನ್ನು ಶ್ಲಾಘಿಸಿದರು ಮತ್ತು ಮುಂಬರುವ ಹೊಸ ಕಾರ್ಯ ಯೋಜನೆಗಳ ಕುರಿತು ಅವರಿಂದ ಮಾರ್ಗದರ್ಶನ ಪಡೆದರು.

ವಿದೇಶದಲ್ಲಿ ನಿಯೋಜನೆಗೊಂಡಾಗ ಭಾರತೀಯ ವಲಸಿಗರೊಂದಿಗೆ ತಮ್ಮ ಸಂಪರ್ಕವನ್ನು ವಿಸ್ತರಿಸಲು ತರಬೇತಿನಿರತ ಅಧಿಕಾರಿಗಳಿಗೆ ಮೋದಿ ಸೂಚಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

2023 ರ ಬ್ಯಾಚ್‌ನ IFS ಟ್ರೈನಿ ಅಧಿಕಾರಿಗಳು ಪ್ರಧಾನಿ ಅವರ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಭೇಟಿಯಾದರು. 15 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 36 ಐಎಫ್‌ಎಸ್ ಅಧಿಕಾರಿ ತರಬೇತಿದಾರರಿದ್ದಾರೆ.

ದೇಶದ ಸಂಸ್ಕೃತಿಯನ್ನು ಯಾವಾಗಲೂ ಹೆಮ್ಮೆ ಮತ್ತು ಘನತೆಯಿಂದ ತಮ್ಮೊಂದಿಗೆ ಕೊಂಡೊಯ್ಯಬೇಕು ಮತ್ತು ಎಲ್ಲಿ ನಿಯೋಜನೆಯಾದರೂ ಅದನ್ನು ಪ್ರದರ್ಶಿಸಲು ಪ್ರಯತ್ನಿಸಬೇಕು. ವೈಯಕ್ತಿಕ ನಡವಳಿಕೆ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಭುತ್ವ ಮನಸ್ಥಿತಿಯನ್ನು ಹೋಗಲಾಡಿಸಿ, ದೇಶದ ಹೆಮ್ಮೆಯ ಪ್ರತಿನಿಧಿಗಳಾಗಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Post a comment

No Reviews