
ನವದೆಹಲಿ :ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ, ಅವರ ವಿರುದ್ಧ ತನಿಖೆಯಾಗಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಸಾರ್ವಜನಿಕ ರ್ಯಾ ಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಹೈಕಮಾಂಡ್ ಭ್ರಷ್ಟವಾದಾಗ ಕೆಳಗೆ ಇರುವವರಿಗೆ ಲೂಟಿ ಹೊಡೆಯಲು ಪರವಾನಿಗೆ ನೀಡಿದಂತಾಗಲಿದೆ. ಕಾಂಗ್ರೆಸ್ ಆಡಳಿತ ಮಾಡಿದ ಯಾವ ರಾಜ್ಯವೂ ಅಭಿವೃದ್ಧಿಯಾಗಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಅಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ಖುದ್ದು ಅಲ್ಲಿಯ ಮುಖ್ಯಮಂತ್ರಿ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ, ಹೈಕೋರ್ಟ್ ಚಾಟೀ ಬೀಸಿ ತನಿಖೆಗೆ ಆದೇಶಿಸಿದೆ ಎಂದು ತಿವಿದಿದ್ದಾರೆ.
ಕರ್ನಾಟಕ ಸಿಎಂ ವಿರುದ್ಧ ಭೂ ಹಗರಣ ಆರೋಪ ಕೇಳಿ ಬಂದು, ಅದರ ತನಿಖೆ ಶುರುವಾಗುತ್ತಿದ್ದಂತೆಯೇ ಹೈಕೋರ್ಟ್ಗೆ ಹೋಗಿದ್ದರು. ಹೈಕೋರ್ಟ್ ಕೂಡ ಅವರಿಗೆ ಛಾಟಿ ಬೀಸಿದೆ. ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಲೇಬೇಕು. ಹೀಗೆ ಭ್ರಷ್ಟಾಚಾರ ಮಾಡಿದವರಿಗೆ ಹರಿಯಾಣದಲ್ಲಿ ಅವಕಾಶ ಕೊಡ್ತಿರಾ? ಎಂದು ಮೋದಿ ಪ್ರಶ್ನಿಸಿದ್ದಾರೆ.
Poll (Public Option)

Post a comment
Log in to write reviews