
ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿನ ಬಿಡುಗಡೆಗೆ 9 ಕೋಟಿಗೂ ಅಧಿಕ ರೈತರು ಕಾಯುತ್ತಿದ್ದಾರೆ. ಆದ್ದರಂತೆ ಪ್ರಧಾನಿ ನರೇಂದ್ರ ಮೋದಿ ನಾಳೆ ಶನಿವಾರ 18ನೇ ಕಂತಿನ ಹಣ ಬಿಡುಗಡೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರಕ್ಕೆ ಪ್ರಧಾನಿಗಳು ನಾಳೆ ಭೇಟಿ ನೀಡಲಿದ್ದು ಅಂದೇ ಪಿಎಂ ಕಿಸಾನ್ ಹಣ ಬಿಡುಗಡೆ ಹಾಗು ಇತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಆದ್ದರಂತೆ 9.4 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಸಿಗಲಿದೆ. ಕೇಂದ್ರದಿಂದ ನಾಳೆ ಪಿಎಂ ಕಿಸಾನ್ ಫಲಾನುಭವಿಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಲಿದೆ.
2019ರಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ಐದು ವರ್ಷದಲ್ಲಿ 3 ಲಕ್ಷ ಕೋಟಿಗೂ ಅಧಿಕ ಹಣವನ್ನು ಸರ್ಕಾರ ವ್ಯಯಿಸಿದೆ. ನಾಳೆಯ ಬಿಡುಗಡೆ ಸೇರಿಸಿದರೆ ಸರ್ಕಾರದ ವೆಚ್ಚ ಸುಮಾರು 3.45 ಲಕ್ಷ ಕೋಟಿ ರೂ ಆಗಬಹುದು.
Poll (Public Option)

Post a comment
Log in to write reviews