2024-12-24 06:53:12

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

180 ಜನರಿದ್ದ ವಿಮಾನ ಟ್ರ್ಯಾಕ್ಟರ್‌ಗೆ ಡಿಕ್ಕಿ

ಸುಮಾರು 200 ಜನರಿದ್ದ ಏರ್ ಇಂಡಿಯಾ ವಿಮಾನ ರನ್‌ವೇಯಲ್ಲಿ ಲಗ್ಗೇಜ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಗುರುವಾರ ಪುಣೆಯ ವಿಮಾನನಿಲ್ದಾಣದಲ್ಲಿ ನಡೆದಿದೆ. 

ಲಗ್ಗೇಜ್ ಟ್ರ್ಯಾಕ್ಟರ್‌ಗೆ ಡಿಕ್ಕಿಯಾದ ಹಿನ್ನೆಲೆ ವಿಮಾನದ  ಒಂದು ಭಾಗದ ರೆಕ್ಕೆ ಮತ್ತು ಚಕ್ರಕ್ಕೆ ಹಾನಿಯುಂಟಾಗಿದೆ. ಈ ಅವಘಡ ಸಂಭವಿಸಿದಾಗ  ಬರೋಬ್ಬರಿ 180 ಪ್ರಯಾಣಿಕರು ವಿಮಾನದಲ್ಲಿದ್ದರು. ಸಿಬ್ಬಂದಿ ಸೇರಿದಂತೆ  200 ಜನರು ವಿಮಾನದಲ್ಲಿದ್ದರು, ಈ ವಿಮಾನ ಪುಣೆಯಿಂದ ದೆಹಲಿಯತ್ತ ಹೊರಟಿತ್ತು.

ಈ  ಅವಘಡದಲ್ಲಿ ಸಿಬ್ಬಂದಿ ಸೇರಿದಂತೆ  ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಯಾರಿಗೂ ಯಾವುದೇ ಅಪಾಯ ಆಗಿಲ್ಲ. ಕೂಡಲೇ  ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲಾಯ್ತು ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯನ್ನು  ನೀಡಿದೆ.

ಘಟನೆ ಸಂಬಂಧ ತನಿಖೆಗೆ ಆದೇಶ

ಏರ್ ಇಂಡಿಯಾ ಎಐ-858 ಸಂಜೆ ನಾಲ್ಕು ಗಂಟೆಗೆ ಪುಣೆಯಿಂದ ದೆಹಲಿಗೆ ತೆರಳಬೇಕಿತ್ತು. ಆದರೆ ರನ್‌ವೇನಲ್ಲಿ ಲಗ್ಗೇಜ್‌ ಟ್ರಾಕ್ಟರ್‌ ಡಿಕ್ಕಿಯಾದ ಪರಿಣಾಮ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯ್ತು. ಈ ಅವಘಡ ಸಂಬಂಧ ಡಿಜಿಸಿಎ ತನಿಖೆಗೆ ಆದೇಶಿಸಿದೆ. ಸುರಕ್ಷತಾ ದೃಷ್ಟಿ ಹಿನ್ನೆಲೆ ಅಪಘಾತಕ್ಕೀಡಾದ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ.

 

 

 

Post a comment

No Reviews