
ರೈಲು ಹಳಿಗಳ ಮೇಲೆ 6 ಕೆಜಿ ತೂಕದ ಮರದ ತುಂಡುಗಳನ್ನು ಇರಿಸಿ ರೈಲು ಹಳಿ ತಪ್ಪಿಸುವ ಯತ್ನಿಸಿರುವ ಘಟನೆ ದೆಹಲಿ ಮತ್ತು ಲಖನೌ ನಡುವೆ ಬರೇಲಿ-ವಾರಣಾಸಿ ಎಕ್ಸ್‌ಪ್ರೆಸ್ ರೈಲು ಸಾಗುವ ಹಳಿ ಬಳಿ ನಡೆದಿದೆ.
6 ಕೆಜಿಗೂ ಹೆಚ್ಚು ತೂಕದ ಎರಡು ಅಡಿ ಉದ್ದದ ಮರದ ತುಂಡುಗಳಿಗೆ ರೈಲು ಅದಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಮರದ ತುಂಡುಗಳು ಲೋಹದ ಚಕ್ರಗಳ ಅಡಿಯಲ್ಲಿ ಸಿಕ್ಕಿಕೊಂಡಿದೆ. ಲೋಕೋ ಪೈಲಟ್ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯು ಹಳಿಗಳ ಮೇಲಿನ ಸಿಗ್ನಲಿಂಗ್ ಸಾಧನವನ್ನು ಹಾನಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Tags:
Poll (Public Option)

Post a comment
Log in to write reviews