
ಉತ್ತರ ಪ್ರದೇಶ: ಬರೇಲಿಯಲ್ಲಿ ಸಿವಿಲ್ ನ್ಯಾಯಾಧೀಶ ಮನೆಯಿಂದ ಸಾಕು ನಾಯಿ ಕಳ್ಳತನವಾಗಿದೆ. ನೆರೆಮನೆಯವರು ಸೇರಿಕೊಂಡು ತಮ್ಮ ಸಾಕುನಾಯಿಯನ್ನು ಕದ್ದಿದ್ದಾರೆ ಎಂದು ನ್ಯಾಯಾಧೀಶರ ಕುಟುಂಬ ಆರೋಪಿಸಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಾಣಿ ಹಿಂಸೆ ಕಾಯ್ದೆಯಡಿ ಹನ್ನೆರಡು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಧೀಶರ ಕುಟುಂಬ ಬರೇಲಿಯ ಸನ್‌ಸಿಟಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಕೆಲವು ದಿನಗಳ ಹಿಂದೆ ಪಕ್ಕದ ಮನೆಯ ಅಹಮ್ಮದ್ ಎಂಬ ವ್ಯಕ್ತಿಯೊಂದಿಗೆ ನಾಯಿಯ ವಿಚಾರದಲ್ಲಿ ಗಲಾಟೆ ಉಂಟಾಗಿತ್ತು. ಈ ವೇಳೆ ಅಹಮದ್ ಅವರ ಪುತ್ರ ಖಾದಿರ್ ಖಾನ್ ನ್ಯಾಯಾಧೀಶರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಮೇ 16ರಂದು ಎರಡು ಕುಟುಂಬದ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದ್ದು. ನಾಯಿ ತನ್ನ ಮತ್ತು ತನ್ನ ಮಗಳ ಮೇಲೆ ದಾಳಿ ಮಾಡಿದೆ ಎಂದು ಅಹಮದ್ ಅವರ ಪತ್ನಿ ನ್ಯಾಯಾಧೀಶರ ಕುಟುಂಬದೊಂದಿಗೆ ಜಗಳವಾಡಿದ್ದರು. ಇದೇ ಸಮಯಕ್ಕೆ ನ್ಯಾಯಾಧೀಶರ ಮನೆಯಲ್ಲಿದ್ದ ಸಾಕು ನಾಯಿ ನಾಪತ್ತೆಯಾಗಿದೆ. ಈ ಕುರಿತು ಬರೇಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಅಹಮದ್ ಕುಟುಂಬದ 12 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಕಳುವಾಗಿರುವ ನಾಯಿಯ ಹುಡುಕಾಟದಲ್ಲಿದ್ದಾರೆ.
Poll (Public Option)

Post a comment
Log in to write reviews